ಜನರು ದೈಹಿಕ ಮತ್ತು ಚರ್ಮದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ, ಬಾಯಿಯ ಆರೋಗ್ಯದ ಬಗ್ಗೆ ನಿರ್ಲಕ್ಷಿಸುತ್ತಾರೆ. ಹಾಗಾಗಿ ಸರಿಯಾಗಿ ಹುಲ್ಲುಜ್ಜುವುದಿಲ್ಲ. ಇದರಿಂದ ಬಹಳ ಅಪಾಯಕಾರಿ ಕಾಯಿಲೆಗಳು ನಿಮ್ಮನ್ನು ಕಾಡುತ್ತವೆ. ಹಾಗಾದ್ರೆ ಅವು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
*ಪ್ರತಿದಿನ ಸರಿಯಾಗಿ ಹಲ್ಲುಜ್ಜದಿದ್ದಾಗ ಹಲ್ಲುಗಳಲ್ಲಿರುವ ಕಾರ್ಬೋಹೈಡ್ರೇಟ್ ಬ್ಯಾಕ್ಟೀರಿಯಾಗಳು ಹಲ್ಲುಗಳಲ್ಲಿ ಆಮ್ಲವನ್ನು ಉತ್ಪಾದಿಸಿ ದಂತ ಕವಚ ಮತ್ತು ಹೊರ ಪದರವನ್ನು ಹಾಳು ಮಾಡುತ್ತದೆ. ಇದರಿಂದ ಹುಳುಕು ಸಮಸ್ಯೆ ಕಾಡುತ್ತದೆ.
*ಪ್ರತಿದಿನ ಸರಿಯಾಗಿ ಹಲ್ಲುಜ್ಜದಿದ್ದಾಗ ಒಸಡುಗಳು ದುರ್ಬಲಗೊಳ್ಳುತ್ತದೆ. ಇದರಿಂದ ಹಲ್ಲುಗಳಲ್ಲಿ ರಕ್ತ ಬರಲು ಶುರುವಾಗುತ್ತದೆ. ಒಸಡು ದುರ್ಬಲವಾಗುವುದರಿಂದ ನೋವು, ಊತ, ಹಲ್ಲುಗಳು ವಯಸ್ಸಾಗುವ ಮುಂಚೆಯೇ ಉದುರಿ ಹೋಗಬಹುದು ಹೀಗೆ ಹಲವು ಸಮಸ್ಯೆಗಳು ಕಾಡುತ್ತದೆ.
*ಹಲ್ಲುಗಳನ್ನು ಸರಿಯಾಗಿ ಸ್ವಚ್ಚಗೊಳಿಸದಿದ್ದರೆ ಹಲ್ಲುಗಳನ್ನು ಸಹಾಯಕವಾಗಿರುವ ಮೂಳೆಗಳು ದುರ್ಬಲಗೊಳ್ಳಬಹುದು. ಇದರಿಂದ ಹಲ್ಲು ಉದುರಿ ಹೋಗಬಹುದು.
*ಹಲ್ಲುಗಳಿಂದ ಮೆದುಳಿನಲ್ಲಿ ಊತ ಕಂಡುಬಂದು ಬುದ್ದಿಮಾಂದ್ಯ ಸಮಸ್ಯೆ ಕಾಡಬಹುದು. ಹಾಗೂ ಹಲ್ಲು ಮತ್ತು ಒಸಡು ಕಾಯಿಲೆಗೆ ಬಿದ್ದರೆ ಬಾಯಲ್ಲಿದ್ದ ಬ್ಯಾಕ್ಟೀರಿಯಾ ಹೃದಯವನ್ನು ಪ್ರವೇಶಿಸಿ ಹೃದಯದ ಕಾಯಿಲೆ ಕಾಡಬಹುದು.