ಹಳೆಯ ಸಂಪ್ರದಾಯಗಳನ್ನು ಈಗಲೂ ಪಾಲಿಸಿಕೊಂಡು ಬರುತ್ತಿರುವವರ ಮನೆಯಲ್ಲಿ ಶ್ರೀಮಂತಿಕೆ ಇರುತ್ತದೆಯಂತೆ. ಪುರಾಣಗಳ ಪ್ರಕಾರ ಮಹಾಲಕ್ಷ್ಮಿಗೆ ಒಂದು ಸಹೋದರಿಯಿದ್ದಾಳೆ. ಆಕೆ ಹೆಸರು ದರಿದ್ರ.
ಎಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೋ ಅಲ್ಲಿ ಬಡತನವಿರುವುದಿಲ್ಲವಂತೆ. ಹಾಗೆ ಎಲ್ಲಿ ದರಿದ್ರವಿರುತ್ತದೆಯೋ ಅಲ್ಲಿ ಮಹಾಲಕ್ಷ್ಮಿ ನೆಲೆ ನಿಲ್ಲುವುದಿಲ್ಲವಂತೆ. ಮನೆಯಲ್ಲಿ ಸದಾ ಮಹಾಲಕ್ಷ್ಮಿ ನೆಲೆಸಿ ದರಿದ್ರವನ್ನು ಹೊಡೆದೋಡಿಸಬೇಕಾದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಎಂದೂ ಮನೆಯ ಹೆಬ್ಬಾಗಿಲಿನಲ್ಲಿ ಕಸದ ಬುಟ್ಟಿಯನ್ನು ಇಡಬಾರದು. ಹಾಗೆ ಮಾಡಿದ್ರೆ ಅಕ್ಕ-ಪಕ್ಕದ ಮನೆಯವರ ಜೊತೆಗಿನ ಸಂಬಂಧ ಹಾಳಾಗುತ್ತದೆ.
ರಾತ್ರಿ ಮಲಗುವಾಗ ಪಾತ್ರೆಯನ್ನು ತೊಳದೆ ಮಲಗಬೇಕು. ಪಾತ್ರೆಯನ್ನು ಹಾಗೆ ಇಟ್ಟು ಮಲಗಿದರೆ ಶುಭವಲ್ಲ. ಪಾತ್ರೆಯನ್ನು ಸ್ವಚ್ಛವಾಗಿ ತೊಳೆದಿಟ್ಟಲ್ಲಿ, ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸಿರುತ್ತದೆ.
ಗುರುವಾರ ಹಳದಿ ಬಣ್ಣದ ಅಂದ್ರೆ ಬೇಸಿನ್ ಲಡ್ಡು ಮಾಡಿ ತಿನ್ನಬೇಕು. ಇದರಿಂದ ಮನೆಯಲ್ಲಿರುವವರು ಸುಖವಾಗಿರುತ್ತಾರೆ.
ಸೂರ್ಯಾಸ್ತದ ವೇಳೆ ಬೇರೆಯವರು ಹಾಲು ಅಥವಾ ಮೊಸರು ಕೇಳಿದ್ರೆ ಕೊಡಬಾರದು. ಸಂಜೆ ಹೊತ್ತಿನಲ್ಲಿ ಇವುಗಳನ್ನು ಬೇರೆಯವರಿಗೆ ನೀಡಿದ್ರೆ ಆರ್ಥಿಕ ಸ್ಥಿತಿ ಸುಧಾರಿಸುವುದಿಲ್ಲವಂತೆ.
ಮನೆಯಲ್ಲಿ ಆಗಾಗ ಖೀರ್ ಮಾಡುತ್ತಿರಬೇಕು. ಅಲ್ಲದೆ ಮನೆಯವರೆಲ್ಲ ಒಟ್ಟಿಗೆ ಕುಳಿತು ಖೀರ್ ಸೇವಿಸುವುದು ಶುಭ ಶಕುನವೆಂದು ಭಾವಿಸಲಾಗಿದೆ.