ಪ್ರಾಚೀನ ಕಾಲದಲ್ಲಿ ಮಹಿಳೆಯರು ಬೆಳಿಗ್ಗೆ ಬೇಗ ಎದ್ದು ಮನೆ ಕೆಲಸ ಮಾಡಿ ಸೂರ್ಯ ಉದಯಿಸುವ ವೇಳೆಗೆ ದೇವರ ಪೂಜೆ ಮಾಡುತ್ತಿದ್ದರು.
ಈಗ ಕಾಲ ಬದಲಾಗಿದೆ. ಮಹಿಳೆಯರು ಪುರುಷರ ಜೊತೆ ಎಲ್ಲ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ. ತಮ್ಮ ಕೆಲಸದ ಸಮಯವನ್ನು ಗಮನದಲ್ಲಿಟ್ಟುಕೊಂಡು ಮನೆ ಕೆಲಸ ಮಾಡ್ತಾರೆ. ಯಾವ ಮನೆಯಲ್ಲಿ ಮಹಿಳೆ ಸಂಸ್ಕಾರವಂತಳಾಗಿರುತ್ತಾಳೋ ಆ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ ಎಂದು ಶಾಸ್ತ್ರ ಹೇಳುತ್ತದೆ. ವಾಸ್ತು ಹಾಗೂ ಗ್ರಂಥಗಳ ಪ್ರಕಾರ ಈ ಒಂದು ಕೆಲಸವನ್ನು ಮಹಿಳೆಯರು ಮುಖ್ಯವಾಗಿ ಬೆಳಿಗ್ಗೆಯೇ ಮಾಡಬೇಕು.
ಮನೆ ಎಂದೂ ಸುಂದರವಾಗಿರಬೇಕು. ಮನೆಯನ್ನು ಕ್ಲೀನ್ ಮಾಡುವ ಕೆಲಸವನ್ನು ಮಹಿಳೆಯರು ಯಾವಾಗ್ಲೂ ಬೆಳಿಗ್ಗೆ ಮಾಡಬೇಕು. ಮನೆಯ ಮುಖ್ಯ ದ್ವಾರ ವಾಸ್ತುದೋಷದಿಂದ ಮುಕ್ತವಾಗಿರುವುದು ಬಹಳ ಮುಖ್ಯ. ಮನೆಯ ಮುಖ್ಯದ್ವಾರ ಹಾಗೂ ಅದ್ರ ಸುತ್ತಮುತ್ತಲ ಪ್ರದೇಶ ಸ್ವಚ್ಛವಾಗಿರಬೇಕು. ಸಕಾರಾತ್ಮಕ ಶಕ್ತಿ ಪ್ರವೇಶಕ್ಕೆ ಇದು ಸಹಕಾರಿ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಮುಖ್ಯ ದ್ವಾರವನ್ನು ಸ್ವಚ್ಛಗೊಳಿಸಬೇಕು.
ಸೌಭಾಗ್ಯಕ್ಕಾಗಿ ಮನೆಯ ಮುಖ್ಯ ದ್ವಾರದ ಮುಂದೆ ರಂಗೋಲಿ ಹಾಕಬೇಕು. ಹೂವು ಹಾಗೂ ಸಣ್ಣ ಸಣ್ಣ ಗಂಟೆಗಳಿಂದಲೂ ಮನೆ ಬಾಗಿಲನ್ನು ಅಲಂಕರಿಸಬಹುದು. ಮನೆಯ ಮುಖ್ಯ ದ್ವಾರ ಸುಂದರವಾಗಿದ್ದರೆ ಲಕ್ಷ್ಮಿ ಮನೆ ಪ್ರವೇಶ ಮಾಡಲು ಮನಸ್ಸು ಮಾಡ್ತಾಳೆ. ಮನೆಯ ಮುಖ್ಯ ದ್ವಾರದ ಬಳಿ ಮರದ ಪೊದೆ ಇರುವುದು ಒಳ್ಳೆಯದಲ್ಲ. ಇದ್ರಿಂದ ಅನೇಕ ಸಮಸ್ಯೆಗಳು ಕಾಡುತ್ತವೆ. ಮನೆಯ ಬಾಗಿಲು ತೆರೆಯುವಾಗ ಹಾಗೂ ಹಾಕುವಾಗ ಶಬ್ಧ ಮಾಡಬಾರದು. ಬಾಗಿಲು ಶಬ್ಧ ಮಾಡುತ್ತಿದ್ದರೆ ಮೊದಲು ಅದಕ್ಕೆ ಎಣ್ಣೆ ಹಾಕಿ ಸರಿ ಮಾಡಿ.
ಕೆಲಸದ ನಡುವೆಯೇ ಸೂರ್ಯ ಉದಯಿಸುವ ಮುನ್ನ ಎದ್ದು ಮನೆಯ ಮುಖ್ಯ ದ್ವಾರವನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕುವ ಪದ್ಧತಿಯನ್ನು ರೂಢಿ ಮಾಡಿಕೊಳ್ಳಿ. ಇದು ನಿಮ್ಮ ಮನಸ್ಸಿನ ಜೊತೆಗೆ ಮನೆಯ ವಾತಾವರಣವನ್ನೂ ಬದಲಾಯಿಸುತ್ತದೆ. ಮನಸ್ಸು, ಮನೆಯಲ್ಲೊಂದು ಉಲ್ಲಾಸ, ಸಂತೋಷ ಸದಾ ನೆಲೆಸುವಂತೆ ಮಾಡುತ್ತದೆ.