ವಾಕಿಂಗ್ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ದಿನಕ್ಕೆ 30 ನಿಮಿಷಗಳ ಕಾಲ ವಾಕಿಂಗ್ ಮಾಡುವುದು ಬಹಳ ಒಳ್ಳೆಯದು. ಅನೇಕ ಗಂಭೀರ ಕಾಯಿಲೆಗಳಿಗೆ ವಾಕಿಂಗ್ ಮುಕ್ತಿ ನೀಡಬಲ್ಲದು. ವಾಕಿಂಗ್ ಹೃದಯ ಕಾಯಿಲೆ, ಮಧುಮೇಹ, ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಮಾಡುತ್ತದೆ.
ಅನೇಕರು ಪ್ರತಿ ನಿತ್ಯ ವಾಕಿಂಗ್ ಮಾಡ್ತಾರೆ. ಆದ್ರೆ ಸರಿಯಾದ ರೀತಿಯಲ್ಲಿ ವಾಕಿಂಗ್ ಮಾಡದ ಕಾರಣ ವಾಕಿಂಗ್ ಪ್ರಯೋಜನ ಅವ್ರಿಗೆ ಸಿಗುವುದಿಲ್ಲ. ವಾಕಿಂಗ್ ಮಾಡುವ ಮೊದಲು ಅದ್ರ ನಿಯಮಗಳನ್ನು ತಿಳಿದಿರಬೇಕು.
ವಾಕಿಂಗ್ ಮಾಡುವಾಗ ಹಿಂಭಾಗ ನೇರವಾಗಿರಬೇಕು. ಹೆಚ್ಚಿನ ಜನರು ಬೆನ್ನನ್ನು ಬಾಗಿಸಿ ವಾಕಿಂಗ್ ಮಾಡ್ತಾರೆ. ಇದ್ರಿಂದ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ನಡೆಯುವಾಗ ಯಾವಾಗಲೂ ಹಿಂಭಾಗ ನೇರವಾಗಿರಬೇಕು.
ವಾಕಿಂಗ್ ಮಾಡುವಾಗ ಕೈಗಳನ್ನು ಕಟ್ಟಬಾರದು. ನಡೆಯುವಾಗ ಕೈಗಳು ತೆರೆದಿರಬೇಕು. ಕೈ ಕಟ್ಟಿ ನಡೆದ್ರೆ ಭುಜ ನೋವು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ.
ಕೆಲವರು ಕೇವಲ 10 ರಿಂದ 15 ನಿಮಿಷಗಳ ಕಾಲ ನಡೆಯುತ್ತಾರೆ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವಾಕಿಂಗ್ ಮಾಡಬೇಕು.
ಯಾವ ವಯಸ್ಸಿನಲ್ಲಿ, ಎಷ್ಟು ವಾಕಿಂಗ್ ಪ್ರಯೋಜನಕಾರಿ ಎಂಬುದನ್ನು ನೋಡುವುದಾದ್ರೆ, ತಜ್ಞರ ಪ್ರಕಾರ, 5 ರಿಂದ 18 ವರ್ಷದೊಳಗಿನ ಹುಡುಗರು 16 ಸಾವಿರ ಹೆಜ್ಜೆ ಇಡಬೇಕು. 5 ರಿಂದ 18 ವರ್ಷ ವಯಸ್ಸಿನ ಹುಡುಗಿಯರು 13 ಸಾವಿರ ಹೆಜ್ಜೆಗಳನ್ನು ನಡೆಯಬೇಕು. 19 ರಿಂದ 40 ವರ್ಷದೊಳಗಿನ ಪುರುಷರು ಮತ್ತು ಮಹಿಳೆಯರು ಪ್ರತಿದಿನ 13 ಸಾವಿರ ಹೆಜ್ಜೆಗಳಿಗಿಂತ ಹೆಚ್ಚು ನಡೆಯಬೇಕು. 40 ವರ್ಷಕ್ಕಿಂತ ಮೇಲ್ಪಟ್ಟವರು ಪ್ರತಿದಿನ ಕನಿಷ್ಠ 12 ಸಾವಿರ ಹೆಜ್ಜೆಗಳಾದರೂ ನಡೆಯಬೇಕು. 50 ವರ್ಷಕ್ಕಿಂತ ಮೇಲ್ಪಟ್ಟವರು ಪ್ರತಿದಿನ ಕನಿಷ್ಠ 10 ಸಾವಿರ ಹೆಜ್ಜೆ ನಡೆಯಬೇಕು. 60 ವರ್ಷಕ್ಕಿಂತ ಮೇಲ್ಪಟ್ಟ ಜನರು ಪ್ರತಿದಿನ ಕನಿಷ್ಠ 7 ಸಾವಿರ ಹೆಜ್ಜೆಗಳನ್ನು ನಡೆಯಬೇಕು. ಆದರೆ ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ.