alex Certify ಹಬ್ಬದ ದಿನ ಈ ತಪ್ಪು ಮಾಡಿದ್ರೆ ಅನಾಹುತ ಖಚಿತ, ವಾಸ್ತುಶಾಸ್ತ್ರಕ್ಕೆ ತಕ್ಕಂತಿರಲಿ ನಿಮ್ಮ ಆಚರಣೆ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬದ ದಿನ ಈ ತಪ್ಪು ಮಾಡಿದ್ರೆ ಅನಾಹುತ ಖಚಿತ, ವಾಸ್ತುಶಾಸ್ತ್ರಕ್ಕೆ ತಕ್ಕಂತಿರಲಿ ನಿಮ್ಮ ಆಚರಣೆ !

ಹಬ್ಬಗಳು ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗಗಳಾಗಿವೆ. ಹಬ್ಬಗಳು, ಸಾಮಾಜಿಕ ಬಂಧ, ಸಾಂಪ್ರದಾಯಿಕ ಮೌಲ್ಯ ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ಬಲಪಡಿಸುತ್ತವೆ. ಸಮಾಜದಲ್ಲಿ ಪ್ರೀತಿ ಮತ್ತು ಸೌಹಾರ್ದತೆಯ ಭಾವನೆಯನ್ನು ಇವು ಮೂಡಿಸುತ್ತವೆ. ಹಬ್ಬಗಳ ಆಚರಣೆ ಸಂದರ್ಭದಲ್ಲಿ ವಾಸ್ತು ಶಾಸ್ತ್ರಕ್ಕೆ ಸಂಬಂಧಪಟ್ಟ ನಿಯಮಗಳನ್ನು ತಪ್ಪದೇ ಅನುಸರಿಸಬೇಕು.

ವಾಸ್ತು ಶಾಸ್ತ್ರ ಮತ್ತು ಹಬ್ಬಗಳೆರಡೂ ನಮ್ಮ ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗಗಳಾಗಿವೆ. ವಾಸ್ತುವು ನಮ್ಮನ್ನು ಉತ್ತಮ ಶಕ್ತಿ ಮತ್ತು ಸಮೃದ್ಧಿಯತ್ತ ಮುನ್ನಡೆಸಿದರೆ, ಹಬ್ಬಗಳು ನಮ್ಮನ್ನು ಪರಸ್ಪರ ಪ್ರೀತಿ ಮತ್ತು ಸದ್ಭಾವನೆಯ ಕಡೆಗೆ ಕೊಂಡೊಯ್ಯುತ್ತವೆ.

ಕೊಳಕು ಬಟ್ಟೆ ಧರಿಸುವುದು – ವಾಸ್ತು ಶಾಸ್ತ್ರದ ಪ್ರಕಾರ ಹಬ್ಬ ಹರಿದಿನಗಳಲ್ಲಿ ಮನೆಯಲ್ಲಿರುವ ಋಣಾತ್ಮಕತೆ ಮತ್ತು ಕೆಟ್ಟ ಶಕ್ತಿಯನ್ನು ತಪ್ಪಿಸಲು ಕೆಲವು ನಿಯಮಗಳಿವೆ. ಹರಿದ ಮತ್ತು ಕೊಳಕು ಬಟ್ಟೆಗಳನ್ನು ಹಬ್ಬಗಳಲ್ಲಿ ಧರಿಸಬಾರದು. ಈ ರೀತಿ ಮಾಡಿದರೆ ವ್ಯಕ್ತಿಯ ಶಕ್ತಿ ಸಮೃದ್ಧಿಗೆ ಅಡ್ಡಿಯಾಗುತ್ತದೆ ಮತ್ತು ಅಂತಹ ಬಟ್ಟೆಗಳು ದುರಾದೃಷ್ಟ ತರಬಹುದು. ರೋಗಗಳನ್ನು ಉಂಟುಮಾಡಬಹುದು.

ಮುರಿದ ವಸ್ತುಗಳು – ಹಬ್ಬ ಹರಿದಿನಗಳಲ್ಲಿ ಮನೆಯಲ್ಲಿ ಸ್ವಚ್ಛತೆ ಮತ್ತು ಸುವ್ಯವಸ್ಥೆಗೆ ವಿಶೇಷ ಗಮನಹರಿಸಬೇಕು. ಬಳಕೆಯಾಗದ ಮತ್ತು ಮುರಿದ ವಸ್ತುಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹರಡಬಹುದು. ಇವು ಕುಟುಂಬದಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಟಿಸುತ್ತವೆ.

ಹಬ್ಬದ ದಿನ ಜಗಳ – ವಾಸ್ತುಶಾಸ್ತ್ರ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ ಹಬ್ಬ ಹರಿದಿನಗಳಲ್ಲಿ ಜಗಳ, ವಾದ-ವಿವಾದಗಳನ್ನು ತಪ್ಪಿಸಬೇಕು. ಭಿನ್ನಾಭಿಪ್ರಾಯ ಮತ್ತು ಚರ್ಚೆ, ಮನೆಯಲ್ಲಿ ನಕಾರಾತ್ಮಕತೆಯನ್ನು ಹರಡಬಹುದು. ಇದು ನಮ್ಮ ಪ್ರಗತಿಗೆ ಅಡ್ಡಿಯಾಗಬಹುದು.

ಇದಲ್ಲದೆ ಹಬ್ಬ ಹರಿದಿನಗಳಲ್ಲಿ ಪರಸ್ಪರ ಪ್ರೀತಿ, ಗೌರವ ಭಾವನೆ ಮೂಡುವಂತೆ ವರ್ತಿಸಬೇಕು. ಈ ಸಮಯದಲ್ಲಿ ಯಾರನ್ನಾದರೂ ಅವಮಾನಿಸುವುದು ಅಥವಾ ಅವರಿಗೆ ಅಹಿತಕರ ಪದಗಳನ್ನು ಮಾತನಾಡುವುದು ಸೂಕ್ತವಲ್ಲ. ಹಬ್ಬದ ದಿನ ಹಿರಿಯರನ್ನು ಗೌರವಿಸುವುದು ಮತ್ತು ಅವರ ಆಶೀರ್ವಾದ ಪಡೆಯುವುದು ಬಹಳ ಮುಖ್ಯ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...