![](https://kannadadunia.com/wp-content/uploads/2024/09/1721986395.sidetrackimageVastu-tips-for-placing-tulsi-plant-at-home-FB-1200x700-compressed.jpg)
ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪೂಜ್ಯವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದು ತಾಯಿ ಲಕ್ಷ್ಮಿಯ ಭೌತಿಕ ರೂಪವಾಗಿದೆ. ತುಳಸಿ, ಭಗವಾನ್ ವಿಷ್ಣುವಿಗೆ ಬಹಳ ಪ್ರಿಯವಾದದ್ದು. ತುಳಸಿ ಇಲ್ಲದೆ ಶ್ರೀಹರಿಯ ಆರಾಧನೆ ಅಪೂರ್ಣ. ತುಳಸಿಯನ್ನು ಸರಿಯಾದ ರೀತಿಯಲ್ಲಿ ಪ್ರತಿದಿನ ಪೂಜಿಸಿದರೆ ಲಕ್ಷ್ಮಿ ದೇವಿಯ ಕೃಪೆಯಿಂದ ಶ್ರೀಮಂತರಾಗಬಹುದು.
ತುಳಸಿ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿ
ತುಳಸಿ ಗಿಡವನ್ನು ಮನೆಯಲ್ಲಿ ನೆಟ್ಟರೆ ಧನಾತ್ಮಕತೆ ಬರುತ್ತದೆ. ಇದಕ್ಕಾಗಿ ತುಳಸಿ ಗಿಡವನ್ನು ಮನೆಯ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು.
ತುಳಸಿ ಪೂಜೆ
ತುಳಸಿ ಗಿಡವನ್ನು ಯಾವಾಗಲೂ ಕುಂಡದಲ್ಲಿ ನೆಡಿ. ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿ ಶುಭ್ರವಾದ ವಸ್ತ್ರಗಳನ್ನು ಧರಿಸಿದ ನಂತರ ಪೂಜಿಸಿ. ಏಕಾದಶಿ ಮತ್ತು ಭಾನುವಾರ ಹೊರತುಪಡಿಸಿ ಪ್ರತಿದಿನ ತುಳಸಿಗೆ ನೀರನ್ನು ಅರ್ಪಿಸಿ.
ತುಳಸಿ ಪರಿಕ್ರಮ
ತುಳಸಿಗೆ ಜಲವನ್ನು ಅರ್ಪಿಸಿದ ನಂತರ ಪ್ರದಕ್ಷಿಣೆ ಮಾಡಬೇಕು. ತುಳಸಿ ಗಿಡಕ್ಕೆ ಮೂರು ಬಾರಿ ಪ್ರದಕ್ಷಿಣೆ ಮಾಡಿದರೆ ಲಕ್ಷ್ಮಿ ದೇವಿ ಪ್ರಸನ್ನಳಾಗುತ್ತಾಳೆ. ತುಳಸಿಯನ್ನು ಪ್ರದಕ್ಷಿಣೆ ಮಾಡುವಾಗ ಮನಸ್ಸು ಸಂಪೂರ್ಣವಾಗಿ ಶಾಂತವಾಗಿರಬೇಕು ಮತ್ತು ಶುದ್ಧವಾಗಿರಬೇಕು.
ತುಳಸಿ ಪರಿಕ್ರಮದ ಮಂತ್ರ
ತುಳಸಿ ಗಿಡಕ್ಕೆ ಪ್ರದಕ್ಷಿಣೆ ಹಾಕುವಾಗ ‘ಮಹಾಪ್ರಸಾದ ಜನನಿ, ಸರ್ವ ಸೌಭಾಗ್ಯವರ್ಧಿನಿ ಅಧಿ ವ್ಯಾಧಿ ಹರ ನಿತ್ಯಂ, ತುಳಸಿ ತ್ವಂ ನಮೋಸ್ತುತೇ’ ಎಂಬ ಮಂತ್ರವನ್ನು ಪಠಿಸಿ. ತುಳಸಿ ಗಿಡಕ್ಕೆ ಪ್ರದಕ್ಷಿಣೆ ಹಾಕಲು ಜಾಗ ಇಲ್ಲದೇ ಇದ್ದಲ್ಲಿ ನಿಂತಲ್ಲಿಯೇ ಮೂರು ಬಾರಿ ಪ್ರದಕ್ಷಿಣೆ ಮಾಡಬಹುದು. ಈ ರೀತಿ ವಿಧಿವತ್ತಾಗಿ ತುಳಸಿ ಪೂಜೆ ಮಾಡಿದರೆ ಆರ್ಥಿಕ ಸಂಕಷ್ಟಗಳು ನಿವಾರಣೆಯಾಗುತ್ತವೆ.