ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಾನೆ. ಹೊಟ್ಟೆಯಲ್ಲಿ ಸಮಸ್ಯೆ ಕಾಡ್ತಿದ್ದರೆ ಮನಸ್ಸನ್ನು ಕೆಲಸದ ಮೇಲೆ ಕೇಂದ್ರಿಕರಿಸೋದು ಕಷ್ಟ. ಕೆಲಸದ ಒತ್ತಡದಲ್ಲಿ ಆರೋಗ್ಯದ ಬಗ್ಗೆ ಜನರು ಹೆಚ್ಚು ಗಮನ ನೀಡುವುದಿಲ್ಲ. ಯೋಗ, ವ್ಯಾಯಾಮ ಸೇರಿದಂತೆ ಸರಿಯಾದ ಸಮಯಕ್ಕೆ ಊಟವನ್ನೂ ಮಾಡುವುದಿಲ್ಲ. ಇದ್ರಿಂದ ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಸಾಮಾನ್ಯವಾಗಿ ಎಲ್ಲ ಯೋಗ, ವ್ಯಾಯಾಮವನ್ನು ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಆದ್ರೆ ವಜ್ರಾಸನವನ್ನು ಊಟವಾದ ತಕ್ಷಣ ಮಾಡಬೇಕು. ಇದ್ರಿಂದ ಜೀರ್ಣಕ್ರಿಯೆ ಸುಲಭವಾಗಿ ಹೊಟ್ಟೆ ಸಮಸ್ಯೆ ಕಾಡುವುದಿಲ್ಲ. ಇದನ್ನು ನಿರಂತರವಾಗಿ ಪ್ರತಿದಿನ ಮಾಡಬಹುದು.
ಈ ಆಸನ ಎರಡು ಶಬ್ಧಗಳಿಂದ ಕೂಡಿದೆ. ವಜ್ರ ಪ್ಲಸ್ ಆಸನ. ವಜ್ರ ಅಂದ್ರೆ ಗಟ್ಟಿ ಹಾಗೂ ಬಲ ಎಂದರ್ಥ. ಆಸನದ ಅಭ್ಯಾಸದಿಂದ ದೇಹ ಬಲಪಡೆಯುತ್ತದೆ ಎಂದರ್ಥ. ಈ ಆಸನವನ್ನು ಬೆಳಿಗ್ಗೆ ಹಾಗೂ ಸಂಜೆ ಊಟವಾದ ಮೇಲೆ ಮಾಡಬಹುದು.
ನಿಯಮಿತವಾಗಿ ವಜ್ರಾಸನ ಮಾಡುವುದ್ರಿಂದ ಸಾಕಷ್ಟು ಲಾಭಗಳಿವೆ. ಹೊಟ್ಟೆ ಸಮಸ್ಯೆ ಜೊತೆಗೆ ತೊಡೆಯಲ್ಲಿನ ಕೊಬ್ಬು ಕರಗುತ್ತದೆ. ಬೆನ್ನು ಮೂಳೆಗಳಿಗೆ ವ್ಯಾಯಾಮ ಸಿಗುತ್ತದೆ. ಹೆಬ್ಬೆರಳು, ಪಾದದ ಮೇಲ್ಮೈ, ಹಿಮ್ಮಡಿ, ಮೊಣಕಾಲುಗಳ ಸ್ನಾಯುಗಳು ಸಡಿಲಗೊಳ್ಳುತ್ತವೆ.