
ಒಟಿಟಿ ಪ್ಲಾಟ್‌ಫಾರ್ಮ್‌ಗಳತ್ತ ಜನ ಹೆಚ್ಚೆಚ್ಚು ಆಕರ್ಷಿತರಾಗುತ್ತಿದ್ದಾರೆ, ಹಾಗೆಯೇ ಈ ವೇದಿಕೆಗಳಿಗೆ ಹೊಸ ಹೊಸ ಸವಾಲು ಎದುರಾಗುತ್ತಿದೆ. ಜನಪ್ರಿಯ ಒಟಿಟಿ ವೇದಿಕೆಗಳಲ್ಲಿ ನೆಟ್ ಫ್ಲಿಕ್ಸ್ ಮುಂಚೂಣಿಯಲ್ಲಿದೆ. ಅದು ತನ್ನ ಗ್ರಾಹಕರ ಕೆಲವು ತಪ್ಪುಗಳನ್ನು ಸಹಿಸುವುದಿಲ್ಲ.
ಗ್ರಾಹಕರು ಪಾಸ್‌ವರ್ಡ್‌ಗಳನ್ನು ಇತರರಿಗೆ ಹಂಚಿಕೊಳ್ಳುವುದನ್ನು ನೆಟ್‌ಫ್ಲಿಕ್ಸ್ ಇಷ್ಟಪಡುವುದಿಲ್ಲ. ಸ್ಟ್ರೀಮಿಂಗ್ ವಿಚಾರದಲ್ಲಿ ಗದಿಪಡಿಸಿದ ನಿಯಮಗಳನ್ನು ಉಲ್ಲಂಘಿಸಿದರೆ, ಖಾತೆಗೆ ಪ್ರವೇಶವನ್ನು ಕಳೆದುಕೊಳ್ಳಬಹುದು ಅಥವಾ ನಿಷೇಧಿಸಲೂಬಹುದು.
ಫಲಿತಾಂಶದ ಬಗ್ಗೆ ಅನುಮಾನವಿದ್ದವರಿಗೆ ಸ್ಕ್ಯಾನ್ ಕಾಪಿ
ನೀವು ವಿಪಿಎನ್ ನೆಟ್‌ವರ್ಕ್‌ನಲ್ಲಿ ನೆಟ್‌ಫ್ಲಿಕ್ಸ್ ಬ್ರೌಸ್ ಮಾಡುತ್ತಿರುವುದು ಕಂಡುಬಂದರೆ, ವಿಪಿಎನ್ ನಲ್ಲಿ ಅದನ್ನು ಬಳಕೆ ನಿಲ್ಲಿಸುವಂತೆ ಕೇಳುವ ಪಾಪ್-ಅಪ್ ಬರಲಿದೆ. ಒಂದು ವೇಳೆ ಆ ಎಚ್ಚರಿಕೆ ನಿರ್ಲಕ್ಷಿಸಿದರೆ, ನಿಷೇಧವನ್ನು ಎದುರಿಸುವ ಸಾಧ್ಯತೆಯಿದೆ.
ಗ್ರಾಹಕರು ದೇಶದಲ್ಲಿ ಲಭ್ಯವಿಲ್ಲದ ಟಿವಿ ಕಾರ್ಯಕ್ರಮಗಳನ್ನು ವಿಪಿಎನ್ ಮೂಲಕ ಪ್ರವೇಶಿಸಬಹುದು, ಅದು ನೆಟ್‌ಫ್ಲಿಕ್ಸ್ ನಿಯಮಗಳಿಗೆ ವಿರುದ್ಧವಾಗಿದೆ.
ನೆಟ್‌ಫ್ಲಿಕ್ಸ್ ಇತ್ತೀಚೆಗೆ 2 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ. ಹಾಗೆಯೇ ಕಂಪನಿಯು ಹೊಸ ಚಂದಾದಾರಿಕೆ ಯೋಜನೆ ಪ್ರಾರಂಭಿಸಲು ಯೋಜಿಸುತ್ತಿದ್ದು, ಅದು ಅಸ್ತಿತ್ವದಲ್ಲಿರುವ ಚಂದಾದಾರಿಕೆ ಯೋಜನೆಗಳಿಗಿಂತ ಅಗ್ಗವಾಗಿರಲಿದೆ.