
ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ವೃತ್ತಿಗೆ ಆದ್ಯತೆ ನೀಡುತ್ತಾರೆ. ಮದುವೆ ಅಥವಾ ಮಗುವನ್ನು ಸ್ವಲ್ಪ ತಡವಾಗಿ ಪ್ಲಾನ್ ಮಾಡಲು ಬಯಸುತ್ತಾರೆ. ಬೇಗನೆ ಮದುವೆಯಾಗಿದ್ದರೂ ಇಷ್ಟು ಬೇಗ ತಾಯಿಯಾಗುವುದು ಬೇಡವೆಂಬ ನಿರ್ಧಾರಕ್ಕೆ ಬರುತ್ತಾರೆ. ವೃತ್ತಿಯಲ್ಲಿ ಇನ್ನಷ್ಟು ಯಶಸ್ಸು ಸಿಕ್ಕಿದ ಬಳಿಕ ಮಗು ಮಾಡಿಕೊಳ್ಳಬೇಕು ಎಂದುಕೊಳ್ಳುವವರೇ ಹೆಚ್ಚು.
ಇಂತಹ ಪರಿಸ್ಥಿತಿಯಲ್ಲಿ ಎಲ್ಲರ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಎಂದರೆ ಯಾವ ವಯಸ್ಸಿನಲ್ಲಿ ತಾಯ್ತನ ಬೆಸ್ಟ್ ಅನ್ನೋದು. ತಕ್ಷಣಕ್ಕೆ ತಾಯ್ತನ ಬಯಸದೇ ಇರುವವರು ಎಗ್ ಫ್ರೀಝ್ ಮಾಡಿಟ್ಟುಕೊಳ್ಳಲು ಅವಕಾಶವಿದೆ. ಹಾಗೆ ಮಾಡಿದಲ್ಲಿ ಆಕೆ 40ರ ನಂತರವೂ ತಾಯಿಯಾಗಬಹುದು. ವಿಜ್ಞಾನಿಗಳ ಸಲಹೆಯ ಪ್ರಕಾರ ಯಾವ ವಯಸ್ಸಿನವರೆಗೆ ಮಹಿಳೆಯರು ತಮ್ಮ ಎಗ್ಸ್ ಫ್ರೀಝ್ ಮಾಡುವ ಮೂಲಕ ತಾಯಿಯಾಗುವ ನಿರ್ಧಾರವನ್ನು ಮುಂದೂಡಬಹುದು ಎಂಬುದನ್ನು ತಿಳಿಯಬೇಕು. ವೃತ್ತಿಜೀವನದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲು ಮತ್ತು ತಾಯ್ತನವನ್ನು ಮುಂದೂಡಲು ಬಯಸುವವರಿಗೆ ಈ ಮಾಹಿತಿಯು ಉಪಯುಕ್ತವಾಗಿದೆ.
35 ವರ್ಷಗಳ ನಂತರ ಮಹಿಳೆಯರ ಫಲವತ್ತತೆ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 30 ವರ್ಷ ವಯಸ್ಸಿನ ನಂತರ ಮಹಿಳೆಯ ಎಗ್ಸ್ ಗುಣಮಟ್ಟ ಮತ್ತು ಸಂಖ್ಯೆ ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಈ ಇಳಿಕೆಯು 35 ನೇ ವಯಸ್ಸಿನಲ್ಲಿ ಹೆಚ್ಚು ವೇಗವಾಗಿ ಆಗುತ್ತದೆ. 40 ವರ್ಷ ವಯಸ್ಸಿನ ನಂತರ ಮಹಿಳೆಯರಿಗೆ ಗರ್ಭ ಧರಿಸುವುದು ತುಂಬಾ ಕಷ್ಟವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಹಿಳೆ 40 ವರ್ಷ ದಾಟಿದ ನಂತರವೂ ತಾಯಿಯಾಗಲು ಬಯಸಿದರೆ ಎಗ್ಸ್ ಫ್ರೀಝ್ ಮಾಡಿ ಇಡಬಹುದು.
35-37 ವರ್ಷ ವಯಸ್ಸಿನವರೆಗೆ ಮಹಿಳೆಯರು ಎಗ್ಸ್ ಫ್ರೀಝ್ ಮಾಡಬಹುದು. ಕೆಲವು ಚಿಕಿತ್ಸಾಲಯಗಳು 40-42 ವರ್ಷಗಳವರೆಗೆ ಫ್ರೀಜಿಂಗ್ ಸೌಲಭ್ಯವನ್ನು ಒದಗಿಸುತ್ತವೆ. ಆದಾಗ್ಯೂ ವಯಸ್ಸು ಹೆಚ್ಚಾದಂತೆ ಮೊಟ್ಟೆಗಳ ಗುಣಮಟ್ಟ ಮತ್ತು ಪ್ರಮಾಣವು ಕಡಿಮೆಯಾಗುತ್ತದೆ. ಇದರಿಂದ ಯಶಸ್ಸಿನ ಪ್ರಮಾಣವನ್ನು ಕಡಿಮೆಯಾಗಬಹುದು.
ಆದ್ದರಿಂದ ಭವಿಷ್ಯದಲ್ಲಿ ತಾಯಿಯಾಗಲು ಬಯಸುವ ಮಹಿಳೆಯರು ತನ್ನ ಸ್ವಂತ ಎಗ್ಸ್ ಹೊಂದಲು ಯೋಚಿಸಬೇಕು. 35 ವರ್ಷದೊಳಗೆ ಎಗ್ಸ್ ಫ್ರೀಝ್ ಮಾಡಿಟ್ಟುಕೊಳ್ಳಬೇಕು. ಇದು ಭವಿಷ್ಯದಲ್ಲಿ ತಾಯಿಯಾಗುವ ಅವಕಾಶವನ್ನು ನೀಡುತ್ತದೆ. ಈ ವಯಸ್ಸಿನಲ್ಲಿ ಫ್ರೀಝ್ ಮಾಡಿಟ್ಟ ಎಗ್ಸ್ ಮೂಲಕ ಭವಿಷ್ಯದಲ್ಲಿ ಆರೋಗ್ಯಕರ ಮಗುವನ್ನು ಪಡೆಯಬಹುದು.