ಸಂಚಾರಿ ನಿಯಮ ಉಲ್ಲಂಘನೆ ಮಾಡುವವರ ಸಂಖ್ಯೆ ಸಾಕಷ್ಟಿದೆ. ಇದು ಅಪಘಾತಕ್ಕೆ ಕಾರಣವಾಗ್ತಿದೆ. ಚಾಲಕರು ನಿಯಮ ಪಾಲನೆ ಮಾಡುವುದನ್ನು ಅನಿವಾರ್ಯ ಮಾಡುವ ನಿಟ್ಟಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ಹೆಚ್ಚಿನ ದಂಡ ವಿಧಿಸಲು ಮೋಟಾರು ವಾಹನ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ.
ರಸ್ತೆ ಸುರಕ್ಷತಾ ಸಮೀಕ್ಷೆ ಪ್ರಕಾರ, ದ್ವಿಚಕ್ರ ವಾಹನ ಅಪಘಾತಗಳಲ್ಲಿ ಹೆಚ್ಚಿನವು ಕನ್ನಡಿ ಬಳಸದಿರುವುದರಿಂದ ಹಾಗೂ ಇಂಡಿಕೇಟರ್ ಬಳಸದಿರುವುದು ಆಗ್ತಿದೆ. ಹಾಗಾಗಿ ಕನ್ನಡಿಗಳು ಮತ್ತು ಇಂಡಿಕೇಟರ್ ಬಳಸದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
1988 ರ ಕೇಂದ್ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 5 ಮತ್ತು 7 ರ ಅಡಿಯಲ್ಲಿ ಕನ್ನಡಿಗಳ ಬಳಕೆ ಕಡ್ಡಾಯವಾಗಿದೆ. ವಾಹನವನ್ನು ತಿರುಗಿಸುವಾಗ ಹಿಂಭಾಗದಿಂದ ಬರುವ ವಾಹನಗಳೊಂದಿಗೆ ಅಪಘಾತದ ಸಾಧ್ಯತೆಯನ್ನು ಇದು ಕಡಿಮೆ ಮಾಡುತ್ತದೆ. ದ್ವಿಚಕ್ರ ವಾಹನದಲ್ಲಿ ಇಂಡಿಕೇಟರ್ ಬಳಕೆಯೂ ಬಹಳ ಮುಖ್ಯ. ಇದರಿಂದಾಗಿ ಹಿಂದೆ ಅಥವಾ ಮುಂದೆ ಬರುವ ವಾಹನಗಳಿಗೆ ನೀವು ಎಲ್ಲಿ ವಾಹನ ತಿರುಗಿಸುತ್ತೀರಿ ಎಂಬ ಮಾಹಿತಿ ಸಿಗುತ್ತದೆ.
ಬೆಂಗಳೂರು ಟ್ರಾಫಿಕ್ ಪೊಲೀಸರು, ಕನ್ನಡಿ ಹೊಂದಿರದ ದ್ವಿಚಕ್ರ ವಾಹನ ಸವಾರರಿಗೆ ಕಟ್ಟುನಿಟ್ಟಾಗಿ 500 ರೂಪಾಯಿ ದಂಡ ವಿಧಿಸುತ್ತಾರೆ.