alex Certify ಈ ಪದಾರ್ಥಗಳನ್ನ ಸೇವಿಸಿದ್ರೆ ನಿಮ್ಮ ಹತ್ತಿರಕ್ಕೂ ಸುಳಿಯಲ್ಲ ಗ್ಯಾಸ್ಟ್ರಿಕ್ ಸಮಸ್ಯೆ​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಪದಾರ್ಥಗಳನ್ನ ಸೇವಿಸಿದ್ರೆ ನಿಮ್ಮ ಹತ್ತಿರಕ್ಕೂ ಸುಳಿಯಲ್ಲ ಗ್ಯಾಸ್ಟ್ರಿಕ್ ಸಮಸ್ಯೆ​….!

ಈಗಿನ ಜೀವನಕ್ರಮ ಹಾಗೂ ದೈನಂದಿನ ಆಹಾರ ಚಟುವಟಿಕೆಯಿಂದಾಗಿ ಗ್ಯಾಸ್ಟ್ರಿಕ್​ ಸಮಸ್ಯೆ ಬಹುತೇಕ ಎಲ್ಲರಿಗೂ ಕಾಡಲಿದೆ. ಫಾಸ್ಟ್​ಫುಡ್​ ಸೇವನೆ, ಸೋಡಯುಕ್ತ ಆಹಾರ ಸೇವನೆಯಿಂದಾಗಿ ಗ್ಯಾಸ್ಟ್ರಿಕ್​ ಸಮಸ್ಯೆ ಉಂಟಾಗುತ್ತೆ.

ಈ ಸಮಸ್ಯೆಯಿಂದ ಪರಿಹಾರ ಪಡೆಯಬೇಕು ಅಂದ್ರೆ ಮನೆ ಮದ್ದು ಉತ್ತಮ ಫಲಿತಾಂಶ ನೀಡಬಲ್ಲುದು.

 ಮೊಸರು: ಇದು ಗ್ಯಾಸ್ಟ್ರಿಕ್​ ಸಮಸ್ಯೆಯಿಂದ ಪಾರು ಮಾಡಬಲ್ಲ ಪ್ರಮುಖ ಪದಾರ್ಥವಾಗಿದೆ. ಮೊಸರನ್ನ ತಿನ್ನೋದ್ರಿಂದ ನಿಮ್ಮ ಜೀರ್ಣಕ್ರಿಯೆ ಚೆನ್ನಾಗಿ ಆಗಲಿದೆ. ಅಲ್ಲದೇ ತಾಜಾ ಮೊಸರು ಉತ್ತಮ ಬ್ಯಾಕ್ಟೀರಿಯಾಗಳನ್ನ ಹೊಂದಿರುತ್ತೆ. ಸ್ವಲ್ಪ ನೀರನ್ನ ಹಾಕಿಕೊಂಡು ಜೊತೆಗೆ ಉಪ್ಪನ್ನೂ ಸೇರಿಸಿ ಮೊಸರನ್ನ ಕುಡಿಯಿರಿ.

ಹರ್ಬಲ್​ ಚಹ: ಶುಂಠಿ ಚಹ, ಪುದೀನಾ, ಕಾಳು ಮೆಣಸಿನ ಚಹ, ನಿಂಬು ಚಹ ಗ್ಯಾಸ್ಟ್ರಿಕ್​ ಸಮಸ್ಯೆಗೆ ಪರಿಹಾರ ನೀಡಬಲ್ಲುದು.

ಸೋಂಪು: ಸೋಂಪು ಜೀರ್ಣಕ್ರಿಯೆಗೆ ಸಹಾಯ ಆಗುತ್ತೆ ಅನ್ನೋ ಕಾರಣಕ್ಕೆ ತಲಾತಲಾಂತರಗಳಿಂದ ಭಾರತೀಯ ಆಹಾರ ಪದ್ಧತಿಯ ಪ್ರಕಾರ ಊಟದ ಬಳಿಕ ಸೋಂಪನ್ನ ನೀಡ್ತಾರೆ. ಹೀಗಾಗಿ ನೀವು ಈ ಹಳೆಯ ಅಭ್ಯಾಸವನ್ನ ಮುಂದುವರಿಸಿಕೊಂಡು ಹೋಗುವ ಮೂಲಕ ಈ ಸಮಸ್ಯೆಯಿಂದ ಪಾರಾಗಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...