ಪ್ರದಕ್ಷಿಣೆ ಬಹಳ ಪ್ರಾಚೀನವಾದುದು. ದೇವಾಲಯ, ನದಿ, ಮರ ಇತ್ಯಾದಿಗಳ ಪ್ರದಕ್ಷಣೆಗೆ ಬೇರೆ ಬೇರೆ ಪ್ರಾಮುಖ್ಯತೆ ಇದೆ. ಅಶ್ವತ್ಥ ಮರಕ್ಕೆ ಪ್ರತಿ ದಿನ ಪೂಜೆ ಮಾಡುವ ಜೊತೆಗೆ ಪ್ರದಕ್ಷಣೆ ಹಾಕಬೇಕು. ಇದ್ರಿಂದ ಸಾಕಷ್ಟು ಪ್ರಯೋಜನಗಳಿವೆ.
ಸ್ಕಂದ ಪುರಾಣದ ಪ್ರಕಾರ ಅಶ್ವತ್ಥ ಮರದಲ್ಲಿ ಎಲ್ಲ ದೇವಾನುದೇವತೆಗಳಿರುತ್ತಾರೆ. ಇದನ್ನು ಪ್ರದಕ್ಷಣೆ ಹಾಕುವುದ್ರಿಂದ ಶುದ್ಧ ಆಮ್ಲಜನಕ ನಿಮಗೆ ಸಿಗುತ್ತದೆ. ಪಿತ್ತ, ಕಫ, ವಾತವನ್ನು ಇದು ನಿಯಂತ್ರಿಸುತ್ತದೆ. ಸಂಪ್ರದಾಯದ ಪ್ರಕಾರ ಅಶ್ವತ್ಥ ಮರಕ್ಕೆ 108 ಪ್ರದಕ್ಷಣೆ ಹಾಕಬೇಕು.
ಅಶ್ವತ್ಥ ಮರಕ್ಕೆ ಪ್ರದಕ್ಷಣೆ ಹಾಕಿದ್ರೆ ಮಾನಸಿಕ ಶಾಂತಿ ಸಿಗುತ್ತದೆ.
ಅಶ್ವತ್ಥ ಮರವನ್ನು ಮೂರು ಸುತ್ತು ಪ್ರದಕ್ಷಣೆ ಹಾಕುವುದ್ರಿಂದ ಬಡತನ, ದುಃಖ ಮತ್ತು ದುರದೃಷ್ಟ ಕಡಿಮೆಯಾಗುತ್ತದೆ. ದೀರ್ಘಾಯುಷ್ಯ ಮತ್ತು ಸಮೃದ್ಧಿ ಪ್ರಾಪ್ತಿಯಾಗುತ್ತದೆ.
ಶನಿವಾರ, ಅಮವಾಸ್ಯೆ ದಿನ ಅಶ್ವತ್ಥ ಮರವನ್ನು 7 ಬಾರಿ ಪ್ರದಕ್ಷಣೆ ಹಾಕಿ ಸಾಸಿವೆ ಎಣ್ಣೆಯ ದೀಪ ಹಚ್ಚಿದ್ರೆ ಶನಿದೋಷ ಕಡಿಮೆಯಾಗುತ್ತದೆ.