ಹೆಚ್ಚು ಜಂಕ್ ಫುಡ್ ಸೇವನೆ ಮಾಡುವವರು ನೀವಾಗಿದ್ದರೆ ನಿಮಗೊಂದು ಬ್ಯಾಡ್ ನ್ಯೂಸ್. ಕಡಿಮೆ ಪ್ರಮಾಣದಲ್ಲಿ ಹಣ್ಣು ಸೇವನೆ ಮಾಡುವ ಹಾಗೂ ಹೆಚ್ಚೆಚ್ಚು ಜಂಕ್ ಫುಡ್ ಸೇವನೆ ಮಾಡುವ ಮಹಿಳೆಯರು ಈಗ್ಲೇ ಎಚ್ಚೆತ್ತುಕೊಳ್ಳಿ. ಸಂಶೋಧನೆಯೊಂದು ಆಘಾತಕಾರಿ ವಿಷ್ಯ ಬಹಿರಂಗಪಡಿಸಿದೆ.
ಕಡಿಮೆ ಹಣ್ಣು ಸೇವನೆ ಮಾಡಿ ಹೆಚ್ಚೆಚ್ಚು ಜಂಕ್ ಫುಡ್ ತಿನ್ನುವ ಮಹಿಳೆಯರಲ್ಲಿ ಗರ್ಭಧಾರಣೆ ಪ್ರಮಾಣ ಇಳಿಮುಖವಾಗುತ್ತದೆ. ಒಂದು ವರ್ಷದಲ್ಲಿಯೇ ಗರ್ಭಧಾರಣೆ ಸಾಧ್ಯತೆ ತೀರ ಕಡಿಮೆಯಾಗುತ್ತದೆ ಎಂದು ಸಂಶೋಧನೆ ಹೇಳಿದೆ.
ಸಂಶೋಧಕರು 5598 ಮಹಿಳೆಯರನ್ನು ಸಂಶೋಧನೆಗೊಳಪಡಿಸಿದ್ದರು. ಪ್ರತಿದಿನ ಮೂರು ಅಥವಾ ಅದಕ್ಕಿಂತ ಹೆಚ್ಚು ಹಣ್ಣು ಸೇವನೆ ಮಾಡುವ ಮಹಿಳೆಯರಿಗಿಂತ ದಿನದಲ್ಲಿ ಒಂದು ಹೊತ್ತು ಹಣ್ಣು ತಿನ್ನದ ಮಹಿಳೆಯರಲ್ಲಿ ಗರ್ಭಧಾರಣೆಗೆ ತುಂಬಾ ಸಮಯ ಹಿಡಿದಿತ್ತು. ಅರ್ಧಕ್ಕಿಂತಲೂ ಹೆಚ್ಚು ತಿಂಗಳು ಬೇಕಾಯ್ತು ಎಂದು ಸಂಶೋಧಕರು ಹೇಳಿದ್ದಾರೆ.
ಫಾಸ್ಟ್ ಫುಡ್ ಎಂದೂ ತಿನ್ನದ ಮಹಿಳೆಯರು ವಾರದಲ್ಲಿ ನಾಲ್ಕಕ್ಕಿಂತ ಹೆಚ್ಚು ಬಾರಿ ಫಾಸ್ಟ್ ಫುಡ್ ತಿನ್ನುವ ಮಹಿಳೆಯರಿಗಿಂತ ಬೇಗ ಗರ್ಭಿಣಿಯರಾದ್ರು ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಕಡಿಮೆ ಪ್ರಮಾಣದಲ್ಲಿ ಹಣ್ಣು ತಿನ್ನುವ ಮಹಿಳೆಯರು ಗರ್ಭ ಧರಿಸುವುದು ಕಷ್ಟ. ಹಣ್ಣು ತಿನ್ನುವ ಮಹಿಳೆಯರಿಗಿಂತ ಹಣ್ಣು ತಿನ್ನದ ಮಹಿಳೆಯರ ಸಮಸ್ಯೆ ಶೇಕಡಾ 12ರಷ್ಟು ಹೆಚ್ಚಿರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.