ಹೆಣ್ಣುಮಕ್ಕಳು ಪ್ರತಿ ತಿಂಗಳು ನೋವು ಅನುಭವಿಸುವುದು ಅನಿವಾರ್ಯ. ಮುಟ್ಟಿನ ನೋವು ಸುಮಾರು 7 ರಿಂದ 10 ದಿನಗಳವರೆಗೆ ಕಾಡುತ್ತದೆ. ಮುಟ್ಟಿನ ಆರಂಭಕ್ಕೂ ವಾರ ಮೊದಲೇ ಕೆಲವರಿಗೆ ನೋವು ಪ್ರಾರಂಭವಾಗುತ್ತದೆ. ಇದನ್ನು ಪಿಎಂಎಸ್ ಸಮಸ್ಯೆ ಎಂದು ಕರೆಯಲಾಗುತ್ತದೆ. ಅಂದರೆ ಪಿರಿಯಡ್ಸ್ ಆಗುವ ಮೊದಲು ಕಂಡುಬರುವ ಲಕ್ಷಣಗಳು. ಈ ಸಮಯದಲ್ಲಿ ಮಹಿಳೆಯರ ಹಾರ್ಮೋನುಗಳಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಪರಿಣಾಮ ಅವರ ಮನಸ್ಥಿತಿಯಲ್ಲಿಯೂ ಏರಿಳಿತಗಳಾಗುತ್ತವೆ.
ಋತುಚಕ್ರದ ಮೊದಲು ಮತ್ತು ಮುಟ್ಟಿನ ಸಮಯದಲ್ಲಿ ಬಹಳಷ್ಟು ಮೂಡ್ ಸ್ವಿಂಗ್‌ಗಳಿರುತ್ತವೆ. ಪ್ರೀ ಮೆನ್‌ಸ್ಟ್ರುವಲ್ ಸಿಂಡ್ರೋಮ್ ಅಂದರೆ PMS ಇದ್ದಾಗ ಮೈಕೈ ನೋವು, ಶಕ್ತಿಯ ಕೊರತೆ, ದಣಿದ ಭಾವನೆ, ಮೂಡ್ ಬದಲಾವಣೆಗಳು ಸಾಮಾನ್ಯ. ಕೆಲವು ಮನೆಮದ್ದುಗಳನ್ನು ತೆಗೆದುಕೊಂಡರೆ ಈ ಸಮಸ್ಯೆಗಳಿಂದಲೂ ಪರಿಹಾರವನ್ನು ಪಡೆಯಬಹುದು. ಈ ನೋವನ್ನು ಕಡಿಮೆ ಮಾಡಲು ಕೆಲವು ಗಿಡಮೂಲಿಕೆಗಳು ಸಹಾಯ ಮಾಡುತ್ತವೆ.
ಕೇಸರಿ – PMS ಲಕ್ಷಣಗಳನ್ನು ಕಡಿಮೆ ಮಾಡಲು ಬಯಸಿದರೆ ಕೇಸರಿಯನ್ನು ಬಳಸಬೇಕು. ಕೇಸರಿ ಬಳಕೆಯಿಂದ ದೇಹದಲ್ಲಿ ಹಾರ್ಮೋನ್ ಸಮತೋಲನವನ್ನು ಕಾಪಾಡಬಹುದು. PMSನ ಲಕ್ಷಣಗಳು ಮತ್ತು ಪಿರಿಯಡ್ಸ್ ಸಮಯದಲ್ಲಿ ಆಗುವ ನೋವು, ಸೆಳೆತಗಳನ್ನು ಸಹ ಕೇಸರಿ ಕಡಿಮೆ ಮಾಡುತ್ತದೆ. ಕೆಲವರಿಗೆ PMS ಸಮಯದಲ್ಲಿ ಕಡುಬಯಕೆ, ಕಿರಿಕಿರಿ, ನೋವು ಮತ್ತು ಆತಂಕ ಉಂಟಾಗುತ್ತದೆ. ಆಗ ಕೇಸರಿ ಹಾಲನ್ನು ಸೇವನೆ ಮಾಡಬಹುದು.
ಅರಿಶಿನ – ಅರಿಶಿನ ಅನೇಕ ಸಮಸ್ಯೆಗಳನ್ನು ನಿವಾರಿಸಬಲ್ಲದು. ಅರಿಶಿನವು ಮಹಿಳೆಯರಲ್ಲಿ ಮುಟ್ಟಿಗೂ ಮೊದಲು ಕಾಡುವ ನೋವು, ಸೆಳೆತವನ್ನು ಕಡಿಮೆ ಮಾಡಲು ಸಹ ಪರಿಣಾಮಕಾರಿಯಾಗಿದೆ. ಇದಕ್ಕಾಗಿ ಅರಿಶಿನವನ್ನು ನೀರಿನಲ್ಲಿ ಕುದಿಸಿ ಕುಡಿಯಿರಿ. ಅರಿಶಿನದಲ್ಲಿರುವ ಕರ್ಕ್ಯುಮಿನ್, PMS ನೋವನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ ಊತವೂ ಕಡಿಮೆಯಾಗುತ್ತದೆ.
ಅಶ್ವಗಂಧ – ಇದು ಅತ್ಯಂತ ಪ್ರಯೋಜನಕಾರಿ ಆಯುರ್ವೇದ ಮೂಲಿಕೆಯಾಗಿದೆ. ಮುಟ್ಟಿನ ಸಮಯದಲ್ಲಿ ಅಶ್ವಗಂಧವನ್ನು ಬಳಸಬಹುದು. ಇದು ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಇದರ ಸೇವನೆಯಿಂದ ದೇಹದ ಒತ್ತಡ ಕಡಿಮೆಯಾಗುತ್ತದೆ. ಅಶ್ವಗಂಧವನ್ನು ಹಾಲಿನಲ್ಲಿ ಬೆರೆಸಿ ಕುಡಿಯಿರಿ. ಇದು ಮುಟ್ಟಿನ ವೇಳೆ ದೇಹದಲ್ಲಿನ ಹಾರ್ಮೋನ್‌ಗಳನ್ನು ಸಮತೋಲನಗೊಳಿಸುತ್ತದೆ.