ಆಗಾಗ ಮೂತ್ರ ವಿಸರ್ಜನೆ ಮಾಡುವುದು ನಿಮ್ಮ ದೇಹದಲ್ಲಿ ಆರೋಗ್ಯ ಸಮಸ್ಯೆಯ ಸಂಕೇತವಾಗಿದೆ. ಮೂತ್ರಪಿಂಡದಲ್ಲಿ ಸೋಂಕು, ಮಧುಮೇಹ ಮುಂತಾದ ಸಮಸ್ಯೆ ಇದ್ದಾಗ ಈ ರೀತಿ ಪದೇ ಪದೇ ಮೂತ್ರ ವಿಸರ್ಜನೆ ಸಮಸ್ಯೆ ಕಾಡುತ್ತದೆ. ಮನೆಮದ್ದನ್ನು ಬಳಸಿ ಈ ಸಮಸ್ಯೆಯನ್ನು ನಿವಾರಿಸಬಹುದು. ಆದರೆ ಸಮಸ್ಯೆ ಮತ್ತಷ್ಟು ಹೆಚ್ಚಾದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಮೂತ್ರಪಿಂಡದಲ್ಲಿ ಯಾವುದೇ ಸಮಸ್ಯೆಯಾದರೂ ಕೂಡ ಮೆಂತ್ಯ ಬೀಜಗಳು ಅದನ್ನು ನಿವಾರಿಸುತ್ತವೆ. ಇದು ದೇಹದಲ್ಲಿರುವ ಹಾನಿಕಾರಕ ಏಜೆಂಟ್ ಗಳನ್ನು ಹೊರಗೆ ಹಾಕುತ್ತದೆ. 3 ಚಮಚ ಮೆಂತ್ಯೆ ಬೀಜಗಳನ್ನು ಪುಡಿ ಮಾಡಿ ಅದಕ್ಕೆ 1 ಇಂಚು ತುರಿದ ಶುಂಠಿ, 1 ಚಮಚ ಜೇನುತುಪ್ಪ ಸೇರಿಸಿ ಮಿಕ್ಸ್ ಮಾಡಿ ಒಂದು ಲೋಟ ನೀರಿನಲ್ಲಿ ಸೇರಿಸಿ ಮಿಶ್ರಣ ಮಾಡಿ ದಿನಕ್ಕೆ 2 ಬಾರಿ ಸೇವಿಸಿ.
ಅಡುಗೆ ಸೋಡಾ ಮೂತ್ರಪಿಂಡದಲ್ಲಿರುವ ಬ್ಯಾಕ್ಟೀರಿಯಾವನ್ನು ನಾಶಮಾಡಲು ಸಹಕಾರಿಯಾಗಿದೆ. ಇದು ಸೋಂಕು ಹರಡುವುದನ್ನು ತಡೆಯುತ್ತದೆ. ಹಾಗಾಗಿ 1 ಗ್ಲಾಸ್ ಬೆಚ್ಚಗಿರುವ ನೀರಿಗೆ ½ ಚಮಚ ಅಡುಗೆ ಸೋಡಾ ಸೇರಿಸಿ ಪ್ರತಿದಿನ ಬೆಳಿಗ್ಗೆ ಸೇವಿಸಿ. ಇದನ್ನು ಕನಿಷ್ಠ ಒಂದು ವಾರ ಮಾಡಿ.