
ನೀವು ಪ್ರತಿನಿತ್ಯ ಕಚೇರಿಗೆ ತೆರಳಲು ಒಂದು ಗಂಟೆ ಪ್ರಯಾಣ ಮಾಡ್ತೀರಾ…? ಹಾಗಿದ್ರೆ ಈ ಸುದ್ದಿಯನ್ನು ನೀವು ಓದಲೇಬೇಕು. ಗಂಟೆಗಟ್ಟಲೆ ಪ್ರಯಾಣ ಮಾಡಿ ಆಫೀಸು ತಲುಪೋದು ನಿಮ್ಮ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ. ಸಂಶೋಧನೆಯೊಂದರಲ್ಲಿ ಇದು ದೃಢಪಟ್ಟಿದೆ.
ವರದಿಯೊಂದರ ಪ್ರಕಾರ, ಬಹುತೇಕ ಜನರು ತಮ್ಮ ಸಮಯವನ್ನೆಲ್ಲ ಬಸ್, ರೈಲು ಅಥವಾ ಕಾರಿನಲ್ಲೇ ಕಳೆಯುತ್ತಾರೆ. ನೀವು ಅಧಿಕ ಸಮಯವನ್ನು ಪ್ರಯಾಣದಲ್ಲಿ ಕಳೆದಷ್ಟೂ ನಿಮ್ಮ ಆರೋಗ್ಯಕ್ಕೆ ಅಪಾಯ ಹೆಚ್ಚು.
ತುಂಬಾ ಸಮಯ ವಾಹನದಲ್ಲೇ ಕಳೆಯುವುದರಿಂದ ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ. ಟ್ರಾವೆಲಿಂಗ್ ನಲ್ಲೇ ಹೆಚ್ಚು ಸಮಯ ಕಳೆಯುವುದರಿಂದ ಆರೋಗ್ಯಕರ ಆಹಾರ ಸೇವನೆ ಕಷ್ಟ ಸಾಧ್ಯ. ಜೊತೆಗೆ ನಿದ್ದೆಯ ಅಭಾವವೂ ನಿಮ್ಮನ್ನು ಕಾಡುತ್ತದೆ. ಸಂಶೋಧನೆಯ ಪ್ರಕಾರ ಶೇ.44 ರಷ್ಟು ಮಂದಿ ಪ್ರಯಾಣದ ಸಂದರ್ಭದಲ್ಲಿ ಒತ್ತಡ ಅನುಭವಿಸುತ್ತಾರೆ.