ಸ್ಮಾರ್ಟ್ಫೋನ್ ಬಳಕೆದಾರರು ಫೋನ್ ಬಳಸುವಾಗ ಕೆಲವೊಂದು ತಪ್ಪುಗಳನ್ನು ಮಾಡ್ತಾರೆ. ತಿಳಿಯದೆ ಮಾಡುವ ತಪ್ಪುಗಳು ದೊಡ್ಡ ನಷ್ಟಕ್ಕೆ ಕಾರಣವಾಗುತ್ತದೆ. ಹ್ಯಾಕರ್ ಕೈಗೆ ಸಿಗುವ ಬಳಕೆದಾರರು ಖಾತೆಯ ಹಣ ಖಾಲಿ ಮಾಡಿಕೊಳ್ಳುವ ಸಾಧ್ಯತೆಯಿರುತ್ತದೆ. ಜೊತೆಗೆ ಕೆಲವೊಂದು ಅಪಾಯಕ್ಕೆ ಸಿಲುಕುತ್ತಾರೆ.
ಫೋನ್ ನಲ್ಲಿ ಅಪ್ಲಿಕೇಷನ್ ಗಳನ್ನು ಡೌನ್ಲೋಡ್ ಮಾಡುವ ಮೊದಲು ಅಪ್ಲಿಕೇಷನ್ ನಿಯಮಗಳನ್ನು ಓದಿಕೊಳ್ಳಿ. ಕೆಲವೊಂದು ಅಪ್ಲಿಕೇಷನ್ ಷರತ್ತುಗಳು ಉದ್ದದಿರುತ್ತದೆ. ಅವುಗಳನ್ನು ಓದದೆ ಓಕೆ ಮಾಡಬೇಡಿ. ಕೆಲವೊಂದು ಅಪ್ಲಿಕೇಷನ್ ಗಳು ಫೋನ್ ಸಂಖ್ಯೆ ಸೇರಿದಂತೆ ಅನೇಕ ಮಾಹಿತಿಯನ್ನು ಕೇಳುತ್ತವೆ. ಅವುಗಳನ್ನು ಓದದೇ ಷರತ್ತಿಗೆ ಒಪ್ಪಿಗೆ ನೀಡಿದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಸೋರಿಕೆಯಾಗುತ್ತದೆ.
ಮೊಬೈಲ್ ಫೋನ್ ಅತಿಯಾಗಿ ಬಳಕೆ ಮಾಡುವ ಜನರು ರಾತ್ರಿ ಚಾರ್ಜ್ ಗೆ ಹಾಕ್ತಾರೆ. ರಾತ್ರಿಪೂರ್ತಿ ಚಾರ್ಜ್ ಗೆ ಹಾಕಿ ಬಿಡ್ತಾರೆ. ಇದ್ರಿಂದ ಮೊಬೈಲ್ ಬ್ಲಾಸ್ಟ್ ಆಗುವ ಸಾಧ್ಯತೆಯಿದೆ.
ಫೋನ್ ಚಾರ್ಜ್ ಮಾಡುವ ವೇಳೆ ಬೇರೆ ಯಾವುದೇ ಚಾರ್ಜರ್ ಬಳಸಬೇಡಿ. ಫೋನ್ ಜೊತೆ ನೀಡಿದ ಚಾರ್ಜರ್ ಮಾತ್ರ ಬಳಸಿ. ನಕಲಿ ಚಾರ್ಜರ್ ಬಳಸಬೇಡಿ.
ಮೊಬೈಲ್ ಬ್ಯಾಟರಿ ಹಾಳಾಗಿದ್ದರೆ ನಕಲಿ ಬ್ಯಾಟರಿ, ಕಡಿಮೆ ಬೆಲೆಯ ಬ್ಯಾಟರಿ ಖರೀದಿ ಮಾಡಬೇಡಿ. ಇದು ಬ್ಲಾಸ್ಟ್ ಆಗುವ ಸಾಧ್ಯತೆಯಿರುತ್ತದೆ.
ಒಂದು ವೇಳೆ ಮೊಬೈಲ್ ಫೋನ್ ಬಿಸಿಯಾಗ್ತಿದ್ದರೆ ತಕ್ಷಣ ಮೊಬೈಲ್ ಬಳಕೆಯನ್ನು ನಿಲ್ಲಿಸಿ.