ಕಿವಿ ನಮ್ಮ ದೇಹದ ಅಮೂಲ್ಯ ಅಂಗಗಳಲ್ಲಿ ಒಂದು. ಕಿವಿಯಲ್ಲಿ ತುರಿಕೆ ಕಾಣಿಸಿಕೊಳ್ಳಲು ಅನೇಕ ಕಾರಣಗಳಿವೆ. ಕೆಲವೊಮ್ಮೆ ಕಿವಿ ತುರಿಕೆ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ನಿರಂತರ ಕಿವಿ ತುರಿಕೆ ಹಾಗೂ ಕಿವಿಯಿಂದ ರಕ್ತ ಬರುತ್ತಿದ್ದರೆ ಅದನ್ನು ನಿರ್ಲಕ್ಷ ಮಾಡ್ಬೇಡಿ.
ಕಿವಿ ತುರಿಕೆಗೆ ಅನೇಕ ಕಾರಣಗಳಿವೆ. ಕಿವಿಯಲ್ಲಿ ಬ್ಯಾಕ್ಟೀರಿಯಾ ಶೇಖರಣೆಯಾದಾಗ ಕಿವಿಯಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ.ಕೆಲವೊಮ್ಮೆ ಕಿವಿಯಲ್ಲಿ ನೀರು ಬರುತ್ತದೆ. ನಂತರ ಇದು ಗಂಭೀರ ಸೋಂಕಿಗೆ ಕಾರಣವಾಗುತ್ತದೆ.
ಕೆಲವೊಮ್ಮೆ ಕಿವಿಯ ಕೊಳಕು ಕೂಡ ತುರಿಕೆಗೆ ಕಾರಣವಾಗುತ್ತದೆ. ಕಿವಿಯನ್ನು ಸ್ವಚ್ಛಗೊಳಿಸದೆ ಹೋದಲ್ಲಿ ಕಿವಿಯಲ್ಲಿ ಕೆಸರು ಸೇರಿ ಅದು ತುರಿಕೆಯನ್ನುಂಟು ಮಾಡುತ್ತದೆ.
ಆಹಾರದ ಅಲರ್ಜಿಗಳು ಕಿವಿ ತುರಿಕೆಗೆ ಕಾರಣವಾಗಬಹುದು. ಹಾಲು, ಮೀನು, ಸೋಯಾ, ಸೇಬು, ಚೆರ್ರಿ, ಕಿವಿ ಮತ್ತು ಇತರ ಹಣ್ಣುಗಳು ಕೆಲವರಿಗೆ ಆಗುವುದಿಲ್ಲ. ಆ ಅಲರ್ಜಿ ಕಿವಿ ತುರಿಕೆಗೆ ಕಾರಣವಾಗುತ್ತದೆ. ಆ ಆಹಾರದಿಂದ ದೂರವಿದ್ದರೆ ಸಮಸ್ಯೆ ಕಡಿಮೆಯಾಗುತ್ತದೆ.
ಕೆಲವೊಮ್ಮೆ ಕಿವಿ ಶುಷ್ಕತೆ ಸೋಂಕು ಮತ್ತು ತುರಿಕೆಗೆ ಕಾರಣವಾಗಬಹುದು. ವೈದ್ಯರನ್ನು ಸಂಪರ್ಕಿಸಿ ಈ ಸಮಸ್ಯೆಯಿಂದ ನೀವು ಹೊರಬರಬೇಕು. ಪದೇ ಪದೇ ಕಿವಿ ತುರಿಕೆ ಬರ್ತಿದ್ದರೆ ಅದನ್ನು ಎಂದಿಗೂ ನಿರ್ಲಕ್ಷ್ಯಿಸಬೇಡಿ. ಅದಕ್ಕೆ ಕಾರಣವೇನು ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಂಡು ಅದಕ್ಕೆ ಚಿಕಿತ್ಸೆ ಪಡೆಯಬೇಕು. ಇಲ್ಲದೆ ಹೋದ್ರೆ ಗಂಭೀರ ಸಮಸ್ಯೆಗೆ ತುತ್ತಾಗಬೇಕಾಗುತ್ತದೆ. ಕೆಲವೊಮ್ಮೆ ಕಿವಿ ಕೇಳದ ಪರಿಸ್ಥಿತಿ ನಿರ್ಮಾಣವಾಗುತ್ತದೆ.