ನೀವು ಮಹಿಳೆಯಾಗಿದ್ದು, ಅನೇಕ ವರ್ಷಗಳಿಂದ ನೈಟ್ ಶಿಫ್ಟ್ ಮಾಡ್ತಿದ್ದರೆ ಎಚ್ಚರ. ನಿಮ್ಮ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚಿರುತ್ತದೆ. ಸಂಶೋಧನೆಯೊಂದು ಬಹಳ ಸಮಯ ನೈಟ್ ಶಿಫ್ಟ್ ಮಾಡುವ ಮಹಿಳೆಯರಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿತ್ತು.
ದೀರ್ಘಕಾಲ ನೈಟ್ ಶಿಫ್ಟ್ ಮಾಡುವ ಮಹಿಳೆಯರಲ್ಲಿ ಶೇಕಡಾ 19ರಷ್ಟು ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ ಎಂದು ಸಂಶೋಧನೆ ಹೇಳಿದೆ. ಎಲ್ಲ ವೃತ್ತಿ ಕ್ಷೇತ್ರಗಳಲ್ಲಿ ದೀರ್ಘಕಾಲ ಅಧ್ಯಯನದಿಂದ ತಿಳಿದು ಬಂದಿತ್ತು, ದೀರ್ಘಕಾಲ ರಾತ್ರಿ ಪಾಳಿ ಮಾಡುವ ನರ್ಸ್ ಗಳಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳಲಿದೆಯಂತೆ.
ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡದ ಮಹಿಳೆಯರಿಗಿಂತ ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡುವ ಮಹಿಳೆಯರಲ್ಲಿ ಚರ್ಮದ ಕ್ಯಾನ್ಸರ್ ಶೇಕಡಾ 41ರಷ್ಟು, ಸ್ತನ ಕ್ಯಾನ್ಸರ್ ಶೇಕಡಾ 32ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸಂಶೋಧನೆಯೊಂದು ವಿವರಿಸಿತ್ತು.