
ಇಮ್ತಿಯಾಜ್ ಅಲಿಯವರ ರಾಕ್‌ಸ್ಟಾರ್ ಚಿತ್ರಕ್ಕೆ ಫಿದಾ ಆಗದವರು ಕಡಿಮೆಯೇ. ರಣಬೀರ್ ಕಪೂರ್ ಅವರ ನಟನೆಯ ಈ ಚಿತ್ರದಲ್ಲಿನ ಭಾವಪೂರ್ಣ ಸಂಗೀತ ಮತ್ತು ಒಟ್ಟಾರೆ ಕಥೆ ಸರಳವಾಗಿ ಅದ್ಭುತವಾಗಿದೆ. ಚಿತ್ರದ ಹಾಡುಗಳು ಜನಮನ ಸೂರೆಗೊಂಡಿವೆ. ಅವೆಲ್ಲವೂ ಜನರ ಪ್ಲೇಪಟ್ಟಿಗಳ ಒಂದು ಭಾಗವಾಗಿದೆ. ಅದರಲ್ಲಿಯೂ ತುಮ್ ಹೋ ರೊಮ್ಯಾಂಟಿಕ್ ಹಾಡು ಹೆಚ್ಚು ಪ್ರಚಲಿತದಲ್ಲಿದೆ.
ಅದೇ ಹಾಡಿನ ವಿಡಿಯೋ ತಬಲಾ ವಾದನದೊಂದಿಗೆ ವೈರಲ್ ಆಗಿದೆ. ಇದೀಗ ವೈರಲ್ ಆಗಿರುವ ವಿಡಿಯೋವನ್ನು ವಿನೀತ್ ಸಿಂಗ್ ಎನ್ನುವವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿಕ್ಕ ವಿಡಿಯೋದಲ್ಲಿ ವಿನೀತ್ ತಬಲಾದಲ್ಲಿ ತುಮ್ ಹೋ ಅನ್ನು ಪರಿಣತವಾಗಿ ನುಡಿಸಿದ್ದಾರೆ.
ಟ್ರ್ಯಾಕ್‌ನ ಹಿತವಾದ ಸಂಗೀತದೊಂದಿಗೆ ತಾಳವಾದ್ಯದ ಬಡಿತಗಳು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತವೆ. ನೀವು ಸಂಗೀತ ಪ್ರೇಮಿಯಾಗಿದ್ದರೆ, ನಿಮಗೆ ಇದು ರಸದೌತಣವನ್ನು ಉಣಬಡಿಸುತ್ತದೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ.
https://www.youtube.com/watch?v=4dnyG818bI4&feature=youtu.be