ಹಲವರಿಗೆ ಬೆಳಿಗ್ಗೆ ಹಾಗೂ ಸಂಜೆ ಟೀ ಕುಡಿಯುವ ಅಭ್ಯಾಸವಿದೆ. ಆದರೆ ಈ ಟೀಗೆ ಸಕ್ಕರೆಯನ್ನು ಬಳಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಸಕ್ಕರೆಯ ಬದಲು ಈ ಪದಾರ್ಥಗಳನ್ನು ಬೆರೆಸಿ ಕುಡಿಯಿರಿ.
*ಬೆಲ್ಲ : ಇದು ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಅದು ರಾಸಾಯನಿಕಗಳಿಂದ ಮುಕ್ತವಾಗಿರುತ್ತದೆ. ಇದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.
*ಮುಲೇತಿ : ಇದನ್ನು ಆಯುರ್ವೇದದ ಔಷಧಿಗಳಲ್ಲಿ ಬಳಸುತ್ತಾರೆ. ಇದು ನೈಸರ್ಗಿಕವಾದ ಸಿಹಿಯನ್ನು ಹೊಂದಿದ್ದು, ಇದನ್ನು ಸಕ್ಕರೆ ಬದಲು ಟೀಯಲ್ಲಿ ಬಳಸಿದರೆ ಶೀತ ಮತ್ತು ಕೆಮ್ಮು ಸಮಸ್ಯೆಯಿಂದ ಮುಕ್ತಿಹೊಂದಬಹುದು.
*ಡೇಟ್ ಸಿರಪ್ : ಇದನ್ನು ಖರ್ಜೂರದಿಂದ ತಯಾರಿಸುವುದರಿಂದ ಇದು ತುಂಬಾ ಸಿಹಿಯಾಗಿರುತ್ತದೆ. ಇದನ್ನು ಟೀಗೆ ಸೇರಿಸಿ ಕುಡಿಯುವುದರಿಂದ ಹಲವು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು.