ಆದಾಯ ತೆರಿಗೆ ಕಾಯ್ದೆ 139 ಎಎ ಪ್ರಕಾರ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡೋದು ಕಡ್ಡಾಯವಾಗಿದೆ. ಜೂನ್ 30 ರೊಳಗೆ ಪಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಲು ಕೊನೆ ಗಡುವು ನೀಡಲಾಗಿತ್ತು. ಆದರೆ ಇನ್ನೂ ಕೂಡ ಕೆಲವರು ಪಾನ್ ಗೆ ಆಧಾರ್ ಲಿಂಕ್ ಮಾಡಿಲ್ಲ. ಆಧಾರ್ ನಂಬರ್ ಗೆ ಪಾನ್ ಲಿಂಕ್ ಮಾಡದ ಹಿನ್ನೆಲೆ ಅಂತಹ ಪಾನ್ ಕಾರ್ಡ್ ಗಳನ್ನು ಸ್ಥಗಿತಗೊಳಿಸಲಾಗಿದೆ.
ಮೊದಲು ಮಾರ್ಚ್ 31ರವರೆಗೆ ಇದ್ದ ದಂಡ ಸಮೇತ ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಗೆ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಜೂನ್ 30ರವರೆಗೆ ಇನ್ನು ಮೂರು ತಿಂಗಳ ಹೆಚ್ಚಿನ ಸಮಯಕ್ಕೆ ವಿಸ್ತರಿಸಲಾಯಿತು.
ಈಗಲೂ ಕೂಡ 1000 ರೂ ದಂಡದೊಂದಿಗೆ ಪ್ಯಾನ್ ಜೊತೆ ಆಧಾರ್ ಲಿಂಕ್ ಮಾಡಲು ಅವಕಾಶವಿದ್ದು, ಸೆಪ್ಟೆಂಬರ್ ತಿಂಗಳೊಳಗೆ ನೀವು ಈ ಕೆಲಸ ಮಾಡಬೇಕು.ಇಲ್ಲವಾದಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಕೂಡ ರದ್ದಾಗುವ ಸಾಧ್ಯತೆ ಇದೆ.
ಪಾನ್ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಆಗದ ಕಾರಣ ನಿಷ್ಕ್ರಿಯಗೊಂಡಿರುವ ಪ್ಯಾನ್ ಕಾರ್ಡ್ ಗಳ ಮಾಲೀಕರಿಗೆ ಆದಾಯ ತೆರಿಗೆ ಸಲ್ಲಿಸುವುದಕ್ಕೆ ಸಮಸ್ಯೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಅವರು ಮತ್ತೆ ಪ್ಯಾನ್ ಕಾರ್ಡ್ ಪಡೆದುಕೊಳ್ಳಬೇಕು ಎಂದರೆ ಅದಕ್ಕೆ ಕೂಡ 1000 ಕ್ಕಿಂತ ಹೆಚ್ಚಿನ ದಂಡವನ್ನು ಪಾವತಿ ಮಾಡಬೇಕಾದ ಪರಿಸ್ಥಿತಿ ಇದೆ. ನಿಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಲು ನೀವು https://www.utiitsl.com/ ಅಥವಾ https://www.egov-nsdl.co.in/ ಗೆ ಭೇಟಿ ನೀಡಬಹುದು.