ಮನೆಯಲ್ಲಿ ಎಷ್ಟೇ ಬಾಗಿಲಿರಲಿ. ಮುಖ್ಯ ದ್ವಾರದಿಂದಲೇ ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ. ಹಾಗಾಗಿ ಮನೆಯ ಮುಖ್ಯದ್ವಾರ ಬಹಳ ಪ್ರಮುಖವಾಗುತ್ತದೆ.
ಕೆಟ್ಟ ದೃಷ್ಟಿಗಳಿಂದ ಹಾಗೂ ಕೆಟ್ಟ ಶಕ್ತಿಗಳಿಂದ ಮನೆಯನ್ನು ದೂರವಿಡಬೇಕಾದ್ರೆ ಕೆಲವೊಂದು ಉಪಾಯಗಳನ್ನು ಅನುಸರಿಸಬೇಕಾಗುತ್ತದೆ.
ಮನೆಯ ಮುಖ್ಯ ದ್ವಾರವಿರಲಿ ಅಥವಾ ಗೇಟ್ ಅದಕ್ಕೆ ಹಳದಿ ಅಥವಾ ಕುಂಕುಮ ಬಣ್ಣವನ್ನು ಬಳಿಯಬೇಕು. ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಮುಖ್ಯ ದ್ವಾರದ ಬಣ್ಣ ಬದಲಾಯಿಸಲು ಸಾಧ್ಯವಿಲ್ಲವೆಂದಾದ್ರೆ ಹಳದಿ ಅಥವಾ ಕುಂಕುಮ ಬಣ್ಣದ ವರ್ಣಚಿತ್ರ ಅಥವಾ ಚಿತ್ರ ಅಂಟಿಸಿ.
ಮನೆಯ ಮುಖ್ಯ ಗೇಟ್ ಮೇಲೆ ಸ್ವಸ್ತಿಕ್, ಓಂ, ಶುಭಲಾಭ್ ಯಾವುದನ್ನಾದ್ರೂ ಬರೆಯಿರಿ. ಇದಕ್ಕಾಗಿ ಕೆಂಪು ಬಣ್ಣವನ್ನು ಬಳಸಬಹುದು. ಇದ್ರಿಂದ ದುಷ್ಟರ ಕಣ್ಣು ಮನೆ ಮೇಲೆ ಬೀಳುವುದಿಲ್ಲವೆಂದು ನಂಬಲಾಗಿದೆ.
ಮನೆಯ ಮುಖ್ಯ ದ್ವಾರದ ಬಳಿ ತುಳಸಿ ಗಿಡವನ್ನು ಅವಶ್ಯವಾಗಿಡಿ. ಇದ್ರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುವುದಿಲ್ಲ. ಮಲ್ಲಿಗೆ ಗಿಡವನ್ನು ಕೂಡ ಮನೆ ಮುಂದೆ ಇಡಬಹುದು. ಅದ್ರ ಸುವಾಸನೆ ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ವಾಸ್ತು ದೋಷವನ್ನೂ ನಿವಾರಿಸುತ್ತದೆ.
ಮನೆಯ ಮುಖ್ಯ ದ್ವಾರಕ್ಕೆ ಅಶೋಕ ಅಥವಾ ಮಾವಿನ ಎಲೆಯ ತೋರಣವನ್ನು ಹಾಕಬೇಕು. ಇದು ವಾಸ್ತುದೋಷ ನಿವಾರಿಸುವ ಜೊತೆಗೆ ಆರೋಗ್ಯ ಸಂಬಂಧಿ ಸಮಸ್ಯೆಯನ್ನು ದೂರ ಮಾಡುತ್ತದೆ.