ಅನೇಕರು ತಮ್ಮ ಮನೆಯ ತೋಟದಲ್ಲಿ ಸಸ್ಯಗಳನ್ನು ಬೆಳೆಸುವಾಗ ಎಚ್ಚರಿಕೆ ವಹಿಸುತ್ತಾರೆ. ಕುಟುಂಬಕ್ಕೆ ಒಳಿತು ಮಾಡುವ ಸಸ್ಯಗಳನ್ನು ಹಾಕ್ತಾರೆ. ಆದ್ರೆ ಬಹುತೇಕರು ಸಸ್ಯಗಳನ್ನು ಬೆಳೆಸುವಾಗ ವಾಸ್ತುವಿಗೆ ಗಮನ ನೀಡುವುದಿಲ್ಲ. ಕೆಲವೊಮ್ಮೆ ಮನೆ ಮುಂದಿರುವ ತೋಟವೇ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇದು ನಮ್ಮ ಕುಟುಂಬದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಅನೇಕರು ತಮ್ಮ ಮನೆಯ ಬಳಿ ಬಾಳೆ ಗಿಡ ಹಾಕ್ತಾರೆ. ಆದ್ರೆ ಯಾವ ದಿಕ್ಕಿನಲ್ಲಿ ಬಾಳೆ ಸಸಿ ಬೆಳೆಸಬೇಕೆನ್ನುವ ಬಗ್ಗೆ ತಿಳಿದುಕೊಂಡಿರುವುದಿಲ್ಲ. ವಾಸ್ತುಶಾಸ್ತ್ರದ ಪ್ರಕಾರ ಬಾಳೆ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿ ಹಾಕಿದ್ರೆ ಧನ-ದಾನ್ಯದ ವೃದ್ಧಿಯಾಗುತ್ತದೆ.
ಮನೆ ಮುಂದೆ ತುಳಸಿ, ಬಾಳೆ ಗಿಡವಿರುವುದು ಶುಭ ಸಂಕೇತ. ಈ ಗಿಡಗಳು ಮನೆಯಲ್ಲಿದ್ದರೆ ಎಂದೂ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಜನರು ತುಳಸಿ ಗಿಡವನ್ನು ಪಾಟ್ ನಲ್ಲಿ ಬೆಳೆಸುತ್ತಾರೆ. ತುಳಸಿ ಗಿಡದ ಅಕ್ಕ-ಪಕ್ಕ ಬೇರೆ ಬೇರೆ ಗಿಡಗಳನ್ನು ಇಡ್ತಾರೆ. ಆದ್ರೆ ತುಳಸಿ ಗಿಡದ ಪಕ್ಕ ಬಾಳೆಗಿಡ ಬಿಟ್ಟು ಮತ್ಯಾವ ಗಿಡವನ್ನೂ ಇಡಬಾರದು. ತುಳಸಿ ಗಿಡದ ಬಳಿ ಬಾಳೆ ಗಿಡವಿಟ್ಟರೆ ಭಗವಂತ ವಿಷ್ಣುವಿನ ಜೊತೆ ದೇವಿ ಲಕ್ಷ್ಮಿಯ ಕೃಪೆ ಸಿಗುತ್ತದೆ.
ಯಾವ ಗಿಡದ ಎಲೆ ಅಥವಾ ಹೂ ತೆಗೆಯುವುದರಿಂದ ಹಾಲು ಹೊರ ಬರುತ್ತದೆಯೋ ಅಂತ ಹೂವಿನ ಗಿಡವನ್ನು ಮನೆ ಬಳಿ ಇಡಬಾರದು. ಇದು ಧನ ಹಾನಿಗೆ ಕಾರಣವಾಗುತ್ತದೆ.