ಜನನದ ನಂತ್ರ ಮರಣ ನಿಶ್ಚಿತ. ಇದ್ರಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಮೃತ್ಯುವಿನ ನಂತ್ರ ಏನು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಜ್ಯೋತಿಷ್ಯ ಶಾಸ್ತ್ರ ಹಾಗೂ ಪುರಾಣಗಳಲ್ಲಿ ಮೃತ್ಯುವಿನ ನಂತ್ರದ ಜೀವನವನ್ನು ಎರಡು ಭಾಗವಾಗಿ ವಿಂಗಡಿಸಲಾಗಿದೆ. ಒಂದು ನರಕ, ಇನ್ನೊಂದು ಸ್ವರ್ಗ. ಭೂಮಿ ಮೇಲೆ ಮಾಡಿದ ಪಾಪ-ಪುಣ್ಯಗಳ ಮೇಲೆ ನರಕ, ಸ್ವರ್ಗ ನಿರ್ಧಾರವಾಗುತ್ತದೆ ಎಂದು ನಂಬಲಾಗಿದೆ.
ನರಕಕ್ಕೆ ಹೋಗುವುದನ್ನು ಹೇಗೆ ತಪ್ಪಿಸಿಕೊಳ್ಳಬಹುದು ಎಂಬುದನ್ನು ಪುರಾಣದಲ್ಲಿ ಹೇಳಲಾಗಿದೆ. ಮರಣದ ವೇಳೆ ವ್ಯಕ್ತಿ ಬಳಿ ಈ ವಸ್ತುಗಳಲ್ಲಿ ಒಂದು ವಸ್ತುವಿದ್ದರೂ ವ್ಯಕ್ತಿಯನ್ನು ನರಕಕ್ಕೆ ಕರೆದೊಯ್ಯಲು ಯಮರಾಜನಿಂದ ಸಾಧ್ಯವಿಲ್ಲವಂತೆ. ಜೊತೆಗೆ ಸಾವಿನ ವೇಳೆ ನೋವು ಕೂಡ ಕಾಡುವುದಿಲ್ಲವಂತೆ.
ಮರಣದ ವೇಳೆ ತುಳಸಿ ಗಿಡ ಅಥವಾ ತುಳಸಿ ಎಲೆ ತಲೆ ಮೇಲಿದ್ದರೆ ಯಮರಾಯನ ಭಯವಿರುವುದಿಲ್ಲ. ತುಳಸಿ ವಿಷ್ಣು ಪ್ರಿಯ. ವಿಷ್ಣುವಿನ ತಲೆ ಮೇಲೆ ಸದಾ ಇರುವಂತಹದ್ದು. ಹಾಗಾಗಿ ಮುಕ್ತಿ ದಾರಿ ಸುಲಭವಾಗುತ್ತದೆ.
ಸಾವಿನ ವೇಳೆ ಗಂಗಾಜಲವನ್ನು ಬಾಯಿಗೆ ಬಿಡುವುದ್ರಿಂದ ಅಥವಾ ಮುಖಕ್ಕೆ ಹಾಕುವುದ್ರಿಂದ ಯಮ ವ್ಯಕ್ತಿಯನ್ನು ನರಕಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ. ಗಂಗಾಜಲ ಬಾಯಿಗೆ ಬೀಳ್ತಿದ್ದಂತೆ ವ್ಯಕ್ತಿಯ ಪಾಪವೆಲ್ಲ ತೊಲಗಿ ಪುಣ್ಯ ಲಭಿಸುತ್ತದೆ ಎಂದು ನಂಬಲಾಗಿದೆ.
ಮರಣದ ವೇಳೆ ಭಗವದ್ಗೀತೆ ಕೇಳಿದ್ರೆ ಮೋಹ ಕಡಿಮೆಯಾಗಿ ಆತ್ಮ ಸುಲಭವಾಗಿ ದೇಹವನ್ನು ಬಿಟ್ಟು ಹೋಗುತ್ತದೆ. ಸುಲಭವಾಗಿ ಮುಕ್ತಿ ಪ್ರಾಪ್ತವಾಗುತ್ತದೆ.