ಅಡುಗೆ ಮನೆಯಲ್ಲಿ ಸುಟ್ಟ ಹಾಗೂ ಚಾಕು ತಾಕಿಯೋ ಗಾಯ ಆಗೋದು ಜಾಸ್ತಿ. ಇದೇ ಕಾರಣಕ್ಕಾಗಿ ಅನೇಕರು ಅಡುಗೆ ಮನೆಯಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಬಾಕ್ಸನ್ನು ಇಟ್ಟುಕೊಳ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಪ್ರಥಮ ಚಿಕಿತ್ಸೆ ಬಾಕ್ಸ್ನ್ನು ಅಡುಗೆ ಮನೆಯಲ್ಲಿ ಇಡೋದು ನಿಜಕ್ಕೂ ಒಳ್ಳೆಯದಲ್ಲ.
ಅಡುಗೆ ಮನೆಯಲ್ಲಿ ಔಷಧಿ ಹಾಗೂ ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಅಡುಗೆ ಕೋಣೆಯಲ್ಲಿ ಇಡೋದ್ರಿಂದ ಮನೆಯ ಸದಸ್ಯರು ಪದೇ ಪದೇ ಅನಾರೋಗ್ಯಕ್ಕೀಡಾಗಲಿದ್ದಾರೆ. ಹೀಗಾಗಿ ಅಡುಗೆ ಮನೆಯಲ್ಲಿ ಇಂತಹ ವಸ್ತುಗಳನ್ನು ಇಡಲೇಬಾರದು ಎಂದು ಹೇಳುತ್ತೆ ವಾಸ್ತು ಶಾಸ್ತ್ರ. ಹೀಗಾಗಿ ಮನೆಯವರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಇಂದಿನಿಂದಲೇ ಔಷಧಿ ಹಾಗೂ ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಅಡುಗೆ ಕೋಣೆಯಿಂದ ತೆಗೆದುಬಿಡಿ.