ಆಹಾರಗಳು ಉಳಿದಾಕ್ಷಣ ನಾವು ಹಿಂದೆ ಮುಂದೆ ಆಲೋಚಿಸದೆ ಅವುಗಳನ್ನು ಫ್ರಿಜ್ ನಲ್ಲಿಟ್ಟು ಮರುದಿನ ಬಳಸಬಹುದು ಎಂದುಕೊಳ್ಳುತ್ತೇವೆ. ಆದರೆ ಕೆಲವು ಆಹಾರಗಳನ್ನು ಮತ್ತೆ ಬಿಸಿ ಮಾಡುವುದರಿಂದ ಅವು ವಿಷಕಾರಿಯಾಗಿ ಬದಲಾಗುತ್ತವೆ ಎಂಬುದು ನೆನಪಿರಲಿ. ಹಾಗಾದರೆ ಆ ಆಹಾರ ಯಾವುವು?
ಅಕ್ಕಿ ಸ್ವಚ್ಛವಾಗಿ ತೊಳೆದು ಅನ್ನವನ್ನು ತಯಾರಿಸಿರುತ್ತೀರಿ. ಆದರೆ ಉಳಿದ ಅನ್ನವನ್ನು ಫ್ರಿಜ್ ನಲ್ಲಿಟ್ಟು ಸೇವಿಸುವುದರಿಂದ ಅದರಲ್ಲಿ ಬ್ಯಾಕ್ಟೀರಿಯಾಗಳು ಹುಟ್ಟಿಕೊಳ್ಳುತ್ತವೆ. ಹಾಗೆ ಸೇವಿಸುವುದರಿಂದ ನಿಮಗೆ ವಾಂತಿ ಬೇಧಿಯಂಥ ಸಮಸ್ಯೆಗಳು ಕಂಡು ಬಂದಾವು.
ಮೊಟ್ಟೆಯನ್ನು ಮರುದಿನ ಬಿಸಿ ಮಾಡಿ ಸೇವಿಸುವುದು ಅಷ್ಟೇ ಅಪಾಯಕಾರಿ. ಇದರಿಂದ ಅವು ವಿಷಕಾರಿಯಾಗಿ ಬದಲಾಗಬಹುದು. ಆಲೂಗಡ್ಡೆಯನ್ನು ತಾಜಾ ಇರುವಂತೆಯೇ ಸೇವಿಸಬೇಕು. ಮರುದಿನ ತಿಂದರೆ ಫುಡ್ ಪಾಯಿಸನ್ ಆಗುವ ಸಾಧ್ಯತೆ ಇದೆ.
ಮಾಂಸಾಹಾರ ಪ್ರಿಯರು ಹಿಂದಿನ ರಾತ್ರಿ ಉಳಿದ ಚಿಕನ್ ಅನ್ನು ಫ್ರಿಜ್ ನಲ್ಲಿಟ್ಟು ಮರುದಿನ ಬೆಳಗ್ಗೆ ಬಿಸಿ ಮಾಡಿ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಮತ್ತು ಹೊಟ್ಟೆಯ ಸಮಸ್ಯೆಗಳು ಕಾಡಬಹುದು.