ಮಾರ್ಚ್ 8 ರಂದು ಮಹಾಶಿವರಾತ್ರಿ ಆಚರಿಸಲಾಗ್ತಿದೆ. ಭಕ್ತರು ಶಿವನ ಆರಾಧನೆಗೆ ಈಗಲೇ ಸಿದ್ಧರಾಗ್ತಿದ್ದಾರೆ. ಮಹಾಶಿವರಾತ್ರಿಯಂದು ಶಿವನ ಪೂಜೆ, ಪ್ರಾರ್ಥನೆ ಅದ್ಧೂರಿಯಾಗಿ ನಡೆಯುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹಾ ಶಿವರಾತ್ರಿ ದಿನ ಕನಸಿನಲ್ಲಿ ಕೆಲ ವಸ್ತುಗಳು ಕಂಡರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಶೀಘ್ರವೇ ಶಿವನ ಕೃಪೆ ನಿಮ್ಮ ಮೇಲೆ ಬೀಳಲಿದೆ ಎಂಬ ಸಂಕೇತವನ್ನು ಕನಸು ನೀಡುತ್ತದೆ.
ನಂದಿ ಭಗವಂತ ಶಿವನ ಪ್ರಿಯರಲ್ಲಿ ಒಬ್ಬ. ಕನಸಿನಲ್ಲಿ ನಂದಿ ಕಾಣಿಸಿಕೊಂಡರೆ ಶುಭ ಸಂಕೇತ. ಶೀಘ್ರವೇ ಮನಸ್ಸಿನ ಇಚ್ಛೆ ಈಡೇರಲಿದೆ ಎಂದರ್ಥ.
ಭಗವಂತ ಶಿವನ ತ್ರಿಶೂಲ ಕನಸಿನಲ್ಲಿ ಕಂಡರೆ ಕಾಮ, ಕ್ರೋಧ, ಲೋಭಕ್ಕೆ ಸಂಬಂಧಿಸಿದ ಸಮಸ್ಯೆ ಆದಷ್ಟು ಬೇಗ ದೂರವಾಗಲಿದೆ ಎಂದರ್ಥ. ಇದು ನಿಮ್ಮಲ್ಲಿರುವ ವಿಕಾರ ಗುಣವನ್ನು ನಾಶ ಮಾಡಲಿದೆ.
ಡಮರು ಕನಸಿನಲ್ಲಿ ಕಂಡರೆ ನಿಮ್ಮ ಜೀವನದಲ್ಲಿ ಸ್ಥಿರತೆ ಬರಲಿದೆ ಎಂಬ ಸೂಚನೆ. ಮನೆಯಲ್ಲಿ ಮದುವೆ ಸೇರಿದಂತೆ ಶುಭ ಕಾರ್ಯ ನಡೆಯಲಿದೆ. ಶಿವರಾತ್ರಿಗೆ ಎರಡು ದಿನ ಮೊದಲು ಅಥವಾ ನಂತ್ರ ಡಮರು ಕಾಣಿಸಿಕೊಳ್ಳುವುದು ಶುಭಕರ.
ಶಿವರಾತ್ರಿ ದಿನ ರಾತ್ರಿ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಧನ ಲಾಭವಾಗಲಿದೆ ಎಂದರ್ಥ. ನಾಗದೇವನನ್ನು ಧನದ ಪ್ರತೀಕವೆಂದು ಭಾವಿಸಲಾಗುತ್ತದೆ. ನಾಗ ಭಗವಂತ ಶಿವನ ಆಭರಣ.
ಒಂದು ವೇಳೆ ಕನಸಿನಲ್ಲಿ ಭಗವಂತ ಶಿವನ ಮೂರನೇ ಕಣ್ಣು ಕಾಣಿಸಿದ್ರೆ ಮಂಗಳಕರ. ಜೀವನದಲ್ಲಿ ದೊಡ್ಡ ಪ್ರಗತಿಯಾಗಲಿದೆ. ಶತ್ರುಗಳ ನಾಶವಾಗಲಿದೆ.