ನಿಯಮಿತವಾಗಿ ತರಕಾರಿ ತಿನ್ನುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಬೆಳಗಿನ ಉಪಹಾರದ ಜೊತೆಗೆ, ಮಧ್ಯಾಹ್ನದ ಊಟದೊಂದಿಗೆ ಅನೇಕರು ಹಸಿ ತರಕಾರಿಗಳನ್ನು ತಿನ್ನುತ್ತಾರೆ. ಸಲಾಡ್ ಸೇವಿಸಲು ಇಷ್ಟಪಡುತ್ತಾರೆ. ಆದರೆ ಕೆಲವೊಂದು ತರಕಾರಿಗಳನ್ನು ಅಪ್ಪಿತಪ್ಪಿಯೂ ಹಸಿಯಾಗಿ ತಿನ್ನಬಾರದು. ಅವುಗಳನ್ನು ಬೇಯಿಸಿಯೇ ತಿನ್ನಬೇಕು.
ಬದನೆಕಾಯಿ – ಬದನೆಕಾಯಿ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ತರಕಾರಿ. ಆದರೆ ಇದನ್ನು ಎಂದಿಗೂ ಹಸಿಯಾಗಿ ತಿನ್ನಬಾರದು. ಹಸಿಯಾಗಿ ತಿಂದರೆ ವಾಂತಿ ಮತ್ತು ಹೊಟ್ಟೆನೋವು ಕಾಣಿಸಿಕೊಳ್ಳಬಹುದು.
ಆಲೂಗಡ್ಡೆ – ಬಹಳ ರುಚಿಕರ ತರಕಾರಿಗಳಲ್ಲೊಂದಾದ ಆಲೂಗಡ್ಡೆಯನ್ನು ಬೇಯಿಸಿಯೇ ತಿನ್ನಬೇಕು. ಹಸಿಯಾಗಿ ತಿಂದರೆ ವಾಂತಿ, ಗ್ಯಾಸ್ಟ್ರಿಕ್ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗುತ್ತವೆ.
ಅಣಬೆ – ಅನೇಕರು ಸಲಾಡ್ ರೂಪದಲ್ಲಿ ಅಣಬೆಗಳನ್ನು ಕಚ್ಚಾ ತಿನ್ನಲು ಇಷ್ಟಪಡುತ್ತಾರೆ. ಆದರೆ ಅಣಬೆಗಳನ್ನು ಹಸಿಯಾಗಿ ತಿನ್ನುವುದರಿಂದ ಚರ್ಮದ ಸಮಸ್ಯೆಗಳು ಬರಬಹುದು. ಹಾಗಾಗಿ ಅಣಬೆಗಳನ್ನು ಬೇಯಿಸಿಯೇ ತಿನ್ನಬೇಕು.
ಪಾಲಕ್ ಸೊಪ್ಪು – ಪಾಲಕ್ ಸೊಪ್ಪನ್ನು ಹಸಿಯಾಗಿ ತಿನ್ನುವಂತಿಲ್ಲ. ಕಚ್ಚಾ ತಿಂದರೆ ಅಜೀರ್ಣದಂತಹ ಸಮಸ್ಯೆಗಳಾಗುತ್ತವೆ. ಯಾವಾಗಲೂ ಬೇಯಿಸಿಯೇ ತಿನ್ನಿ.
ಬೀನ್ಸ್ – ಬೀನ್ಸ್ ಕೂಡ ಜನರು ಬಹಳ ಇಷ್ಟಪಡುವಂತಹ ತರಕಾರಿ. ಇದನ್ನು ಹಸಿಯಾಗಿ ತಿಂದರೆ ಹೊಟ್ಟೆ ಅಪ್ಸೆಟ್ ಆಗುತ್ತದೆ. ಹಾಗಾಗಿ ಚೆನ್ನಾಗಿ ಬೇಯಿಸಿಯೇ ತಿನ್ನುವುದು ಸೂಕ್ತ.