ತಾಯಿಯಾದವಳಿಗೆ ಮನೆ, ಮಕ್ಕಳು, ಕೆಲಸ ಎಲ್ಲವನ್ನೂ ಒಟ್ಟಿಗೆ ನಿಭಾಯಿಸೋದು ಕಷ್ಟ. ಆಕೆ ಆರೋಗ್ಯ ಹಾಗೂ ಸೌಂದರ್ಯ ಎರಡಕ್ಕೂ ಗಮನ ನೀಡಲು ಸಮಯವಿರೋದಿಲ್ಲ. ಇಂಥ ಸಂದರ್ಭದಲ್ಲಿ ನಾವು ಹೇಳುವ ಟಿಪ್ಸ್ ನಿಮ್ಮ ಉಪಯೋಗಕ್ಕೆ ಬರಲಿದೆ.
ಕಚೇರಿಗೆ ಹೋಗುವ ವೇಳೆ ಮೇಕಪ್ ಮಾಡಲು ಸಮಯವಿಲ್ಲವೆಂದಾದ್ರೆ ಗಾಢ ಬಣ್ಣದ ಲಿಪ್ಸ್ಟಿಕ್ ಹಚ್ಚಿಕೊಳ್ಳಿ. ಇದು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಬೇರೆ ಮೇಕಪ್ ಅವಶ್ಯಕತೆ ಆಗ ನಿಮಗಿರೋದಿಲ್ಲ.
ಎರಡು ನಿಮಿಷ ಹೆಚ್ಚಿಗೆ ಸಿಗುತ್ತೆ ಎಂದಾದ್ರೆ ಕಣ್ಣಿಗೆ ಕಾಜಲ್ ಹಚ್ಚಿಕೊಳ್ಳಿ. ಮುಖಕ್ಕೆ ಬಿಬಿ ಕ್ರೀಂ ಹಚ್ಚಬಹುದು.
ನಾಳೆ ಯಾವ ಬಟ್ಟೆ ಧರಿಸಬೇಕೆನ್ನುವ ಬಗ್ಗೆ ಹಿಂದಿನ ದಿನವೇ ನಿರ್ಧರಿಸಿ. ಅದನ್ನು ಪ್ರತ್ಯೇಕವಾಗಿ ತೆಗೆದಿಟ್ಟುಕೊಳ್ಳಿ. ಯಾವಾಗಲು ಕಂಫರ್ಟೆಬಲ್ ಮತ್ತು ಮಿಕ್ಸ್ ಅಂಡ್ ಮ್ಯಾಚ್ ಬಟ್ಟೆ ಧರಿಸಿ.
ಡಯಟ್ ಬಗ್ಗೆ ಗಮನ ನೀಡಲು ಸಾಧ್ಯವಾಗ್ತಿಲ್ಲ ಎನ್ನುವವರು ಬ್ಯಾಗ್ ನಲ್ಲಿ ಬಾದಾಮಿ, ಗೋಡಂಬಿ, ಒಣ ದ್ರಾಕ್ಷಿ ಸೇರಿದಂತೆ ಆರೋಗ್ಯಕರ ಆಹಾರವನ್ನು ಇಟ್ಟುಕೊಳ್ಳಿ. ಹಸಿವಾದಾಗ ಇದನ್ನು ತಿನ್ನಿ.
ಹಣ್ಣನ್ನು ಕತ್ತರಿಸಿ ಬಾಕ್ಸ್ ಗೆ ತುಂಬಲು ಸಮಯವಿಲ್ಲವಾದ್ರೆ ಸೇಬು, ಪೇರಳೆ, ಕಿತ್ತಳೆ ಹಣ್ಣನ್ನು ಬ್ಯಾಗ್ ನಲ್ಲಿಟ್ಟುಕೊಳ್ಳಿ.
ವ್ಯಾಯಾಮ, ಜಿಮ್ ಗೆ ಸಮಯವಿಲ್ಲವೆಂದಾದ್ರೆ ಐದು ನಿಮಿಷ ಡಾನ್ಸ್ ಮಾಡಿ. ಇದು ನಿಮ್ಮ ದೇಹಕ್ಕೆ ಒಳ್ಳೆ ವ್ಯಾಯಾಮ ನೀಡುತ್ತದೆ.
ಕೆಲಸ ಹೆಚ್ಚಾದಂತೆ ಮರೆವು ಜಾಸ್ತಿಯಾಗುತ್ತದೆ. ಹಾಗಾಗಿ ನಾಳೆ ಮಾಡುವ ಕೆಲಸದ ಪಟ್ಟಿ ಮಾಡಿ. ಇದು ನಿಮ್ಮ ಮರೆವಿಗೆ ಫುಲ್ ಸ್ಟಾಪ್ ನೀಡುತ್ತದೆ.
ರಾತ್ರಿ ಮಲಗುವ ಮೊದಲು ಧ್ಯಾನ ಮಾಡಿ. ಇದು ಮರು ದಿನ ಫ್ರೆಶ್ ಆಗಿ ಏಳಲು ನೆರವಾಗುತ್ತದೆ.