ಇದು ಅನಾರೋಗ್ಯ ಸಮಸ್ಯೆಗಳಷ್ಟೇ ಅಲ್ಲ, ಸೊಳ್ಳೆಗಳನ್ನು ಓಡಿಸುವ ಶಕ್ತಿ ಹೊಂದಿದೆ. ಇವುಗಳ ಹೂವುಗಳು ಸೊಳ್ಳೆಗಳನ್ನು ದೂರ ಓಡಿಸುತ್ತವೆ. ಆದ ಕಾರಣ ತುಳಸಿ ಗಿಡಗಳನ್ನು ಬೆಳೆಸಿಕೊಂಡರೆ ಸೊಳ್ಳೆಗಳಿಂದ ಪಾರಾಗಬಹುದು.
ಲವಂಗ ಗಿಡ
ಲವಂಗ ಗಿಡದ ಎಲೆಗಳಿಂದ ಬರುವ ವಾಸನೆ ಅಷ್ಟೇ ಅಲ್ಲ, ಈ ಗಿಡದ ಹೂವುಗಳು ಸಹ ಸೊಳ್ಳೆಗಳನ್ನು ಓಡಿಸುತ್ತವೆ. ಹೀಗಾಗಿ ಈ ಗಿಡವನ್ನು ಮನೆಯಲ್ಲಿ ಬೆಳೆಸಿಕೊಂಡರೆ ಉಪಯುಕ್ತ. ಲವಂಗ ಎಣ್ಣೆಯನ್ನು ನಿದ್ರಿಸುವ ಮುನ್ನ ಚರ್ಮಕ್ಕೆ ಹಚ್ಚಿಕೊಂಡರೆ ಆ ವಾಸನೆಗೂ ಸೊಳ್ಳೆಗಳು ಹತ್ತಿರ ಸುಳಿಯಲ್ಲ.
ಚೆಂಡು ಹೂವು
ಚೆಂಡು ಹೂವಿನ ಗಿಡಗಳನ್ನು ಮನೆಯಲ್ಲಿ ಬೆಳೆಸಿದರೆ ಸೊಳ್ಳೆಗಳಿಂದ ಪಾರಾಗಬಹುದು. ಚೆಂಡು ಹೂಗಳನ್ನು ಅರೆದು ಚರ್ಮಕ್ಕೆ ಹಚ್ಚಿಕೊಂಡರೆ ಸೊಳ್ಳೆಗಳು ಕಚ್ಚುವುದಿಲ್ಲ.