ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡಿದ್ರೆ ಮನೆಯಲ್ಲಿ ಅಶಾಂತಿ, ದುಃಖ, ನೋವು ನೆಲೆಸುತ್ತದೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ಮನೆಯಲ್ಲಿರುವ ಕೆಲವೊಂದು ವಸ್ತುಗಳಿಂದಾಗಿ ಮನೆಯೊಳಗೆ ನಕಾರಾತ್ಮಕ ಶಕ್ತಿ ನಿರಾಯಾಸವಾಗಿ ಪ್ರವೇಶ ಮಾಡುತ್ತದೆ. ಹಾಗಾಗಿ ನಕಾರಾತ್ಮಕ ಶಕ್ತಿಯನ್ನು ಸೆಳೆಯುವ ವಸ್ತುಗಳನ್ನು ಮನೆಯಿಂದ ದೂರ ಇಡುವುದು ಒಳಿತು.
ಮನೆಯೊಳಗೆ ಪಾರಿವಾಳದ ಗೂಡಿದ್ದರೆ ತಕ್ಷಣ ಅದನ್ನು ತೆಗೆದು ಹಾಕಿ. ಇದರಿಂದ ಬಡತನ ಬರುವುದಲ್ಲದೆ ಅಸ್ಥಿರತೆಯುಂಟಾಗುತ್ತದೆ.
ಮನೆಯ ಅಂಗಳದಲ್ಲಿಟ್ಟ ಮರದ ಕುರ್ಚಿ ಅಥವಾ ಗೋಡೆಯ ಮೂಲೆಗೆ ಜೇನು ಕಟ್ಟಿದ್ದರೆ ಅದು ಅಪಾಯದ ಲಕ್ಷಣ. ಇದರಿಂದಾಗಿ ಮನೆಯಲ್ಲಿ ದುರ್ಭಾಗ್ಯ ಹಾಗೂ ಆರ್ಥಿಕ ಸಮಸ್ಯೆಗಳು ಎದುರಾಗುತ್ತದೆ.
ಮನೆಯಲ್ಲಿ ಜೇಡರ ಬಲೆ ಕಟ್ಟದಂತೆ ನೋಡಿಕೊಳ್ಳಿ. ಜೇಡರ ಬಲೆ ಆರ್ಥಿಕ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ವಾರದಲ್ಲಿ ಒಂದು ದಿನ ಮನೆಯ ಮೂಲೆ ಮೂಲೆಯನ್ನು ಸ್ವಚ್ಛಗೊಳಿಸಿ ಜೇಡರ ಬಲೆ ಇರದಂತೆ ನೋಡಿಕೊಳ್ಳಿ.
ಮನೆಯಲ್ಲಿ ಒಡೆದ ಗ್ಲಾಸಿನ ವಸ್ತುಗಳನ್ನು ಇಡಬೇಡಿ. ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
ಬಾವಲಿಗಳು ದುರ್ಭಾಗ್ಯ, ಸಾವು, ಬಡತನದ ಸಂಕೇತ. ಹಾಗಾಗಿ ಸೂರ್ಯಾಸ್ತದ ನಂತ್ರ ಮನೆಯ ಎಲ್ಲ ಕಿಟಕಿ, ಬಾಗಿಲುಗಳನ್ನು ಮುಚ್ಚಿಬಿಡಿ. ಕತ್ತಲೆಯಲ್ಲಿ ಬಾವಲಿಗಳು ಮನೆ ಪ್ರವೇಶ ಮಾಡದಂತೆ ನೋಡಿಕೊಳ್ಳಿ.
ಪ್ರತಿದಿನ ದೇವರಿಗೆ ಹೂವನ್ನು ಅರ್ಪಿಸುತ್ತಿದ್ದರೆ, ಹಳೆಯ ಹೂವನ್ನು ಅಲ್ಲಿಂದ ತೆಗೆದು ಹಾಕಿ. ಹಳೆ ಹೂವು ಮನೆಯ ಬಡತನಕ್ಕೆ ಕಾರಣವಾಗುತ್ತದೆ.
ಮನೆಯೊಳಗೆ ಒಣಗಿದ ಎಲೆಗಳು ಪ್ರವೇಶ ಮಾಡದಂತೆ ನೋಡಿಕೊಳ್ಳಿ. ಮನೆಯ ಗೋಡೆಗಳು ಬಿರುಕು ಬಿಟ್ಟಲ್ಲಿ ತಕ್ಷಣ ಅದನ್ನು ಸರಿಪಡಿಸಿ. ಮನೆಯ ಯಾವುದೇ ನಲ್ಲಿ ಹಾಳಾಗಿದ್ದು, ನೀರು ಬೀಳ್ತಾ ಇದ್ದಲ್ಲಿ ಅದನ್ನು ಸರಿಪಡಿಸುವುದು ಒಳ್ಳೆಯದು. ಇದರಿಂದ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ.