ಕೋವಿಡ್-19 ಲಸಿಕಾಕರಣ, ಸಾಮಾಜಿಕ ಅಂತರ ಮತ್ತು ಆಂತರಿಕ ವೆಂಟಿಲೇಷನ್‌ಅನ್ನು ಸರಿಯಾಗಿ ಪಾಲನೆ ಮಾಡಿದಲ್ಲಿ ಲಾಕ್‌ಡೌನ್‌ಗಳ ಅಗತ್ಯ ಇರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಗೆ ಭಾರತದ ಮುಖ್ಯಸ್ಥ ತಿಳಿಸಿದ್ದಾರೆ.
“ಸದ್ಯದ ಪರಿಸ್ಥಿತಿಯಲ್ಲಿ, ಚಾಲ್ತಿಯಲ್ಲಿರುವ ಕ್ರಮಗಳು ಪ್ರಭಾವಿಯಾಗಿ ಮುಂದುವರೆಯಲಿವೆ. ಲಸಿಕಾಕರಣದ ವ್ಯಾಪ್ತಿಯ ವಿಸ್ತರಣೆ, ಮಾಸ್ಕ್ ಧಾರಣೆ, ಕೈಗಳ ಶುಚಿತ್ವ ಕಾಪಾಡಿಕೊಳ್ಳುವುದು, ಆಂತರಿಕ ವೆಂಟಿಲೇಷನ್, ಜನಜಂಗುಳಿ ತಪ್ಪಿಸಿಕೊಳ್ಳುವುದು, ಹಬ್ಬುವಿಕೆಯ ಸರಪಳಿ ಕತ್ತರಿಸಲು ಸಹಾಯ ಮಾಡುವುದು. ಇವುಗಳನ್ನು ಪಾಲನೆ ಮಾಡಿದಲ್ಲಿ ಲಾಕ್‌ಡೌನ್‌ಗಳ ಅಗತ್ಯವೇ ಇರುವುದಿಲ್ಲ,” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಮುಖ್ಯಸ್ಥ ರೋಡ್ರಿಕೋ ಎಚ್ ಒಫ್ರಿನ್ ತಿಳಿಸಿದ್ದಾರೆ.
ಎಚ್ಚರ..! ನಿಮ್ಮ ಫೋನ್ ನಲ್ಲಿಯೂ ಈ ಅಪ್ಲಿಕೇಷನ್ ಇದ್ರೆ ಖಾಲಿಯಾಗುತ್ತೆ ಬ್ಯಾಂಕ್ ಖಾತೆ
ಜನರು ಮತ್ತು ಸಂಚಾರದ ಮೇಲೆ ಒಟ್ಟಾರೆ ನಿಷೇಧ ಹೇರಿದಲ್ಲಿ, ಅದು ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದ ಒಫ್ರಿನ್, ಕೋವಿಡ್-19ಅನ್ನು ನಿಯಂತ್ರಣಕ್ಕೆ ತರಲು ರಿಸ್ಕ್ ಆಧರಿತ ಕ್ರಮಗಳನ್ನು ಭಾರತ ಸರ್ಕಾರ ತೆಗೆದುಕೊಳ್ಳಬೇಕೇ ಹೊರತು ಒಟ್ಟಾರೆಯಾಗಿ ನಿಷೇಧಾಜ್ಞೆಗಳನ್ನು ತರುವುದು ಸಲ್ಲ ಎಂದಿದ್ದಾರೆ.
ಕೇಂದ್ರ ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2.38 ಲಕ್ಷ ಹೊಸ ಕೋವಿಡ್-19 ಸೋಂಕುಗಳು ದಾಖಲಾಗಿದ್ದು, 310 ಮಂದಿ ಮೃತಪಟ್ಟಿದ್ದಾರೆ. ಈ ಸಂಬಂಧ ಲಘು, ಅಲ್ಪ ಮತ್ತು ತೀವ್ರವಾದ ಮಟ್ಟದಲ್ಲಿ ಕೋವಿಡ್-19 ಸೋಂಕಿನ ಲಕ್ಷಣಗಳು ಕಂಡು ಬರುವ ಮಂದಿಯನ್ನು ಪತ್ತೆ ಮಾಡಿ, ಚಿಕಿತ್ಸೆ ನೀಡಲು ಕೋರಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.