ಅನೇಕ ಬಾರಿ ತಿಳಿಯದೇ ಮಾಡುವ ತಪ್ಪುಗಳು ನಮ್ಮ ಪ್ರಾಣಕ್ಕೇ ಮಾರಕವಾಗುತ್ತವೆ. ಆಹಾರ ಪದಾರ್ಥಗಳನ್ನು ಅತಿಯಾಗಿ ಬೇಯಿಸುವುದು ಕೂಡ ಇಂತಹ ತಪ್ಪುಗಳಲ್ಲೊಂದು. ಈ ರೀತಿ ಅತಿಯಾಗಿ ಬೇಯಿಸಿದ ಕೆಲವು ಪದಾರ್ಥಗಳನ್ನು ತಿನ್ನುವುದರಿಂದ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳು ಬರುತ್ತವೆ.
ಕೆಂಪು ಮಾಂಸ
ಕೆಂಪು ಮಾಂಸವನ್ನು ಹೆಚ್ಚು ಬೇಯಿಸಿದಾಗ ಕ್ಯಾನ್ಸರ್‌ಗೆ ಕಾರಣವಾದ ರಾಸಾಯನಿಕಗಳು ಅದರಿಂದ ಹೊರಬರಲು ಪ್ರಾರಂಭಿಸುತ್ತವೆ. ಹಾಗಾಗಿ ಕಡಿಮೆ ಉರಿಯಲ್ಲಿ ಹದವಾಗಿ ಬೇಯಿಸಿ ಸೇವಿಸಬೇಕು.
ಆಲೂಗಡ್ಡೆ
ಹೆಚ್ಚಿನ ಉರಿಯಲ್ಲಿ ಆಲೂಗಡ್ಡೆಯನ್ನು ಬೇಯಿಸುವುದರಿಂದ ಅದರಿಂದ ಹಾನಿಕಾರಕ ಅಕ್ರಿಲಾಮೈಡ್ ಬಿಡುಗಡೆಯಾಗುತ್ತದೆ. ಇದು ಆರೋಗ್ಯಕ್ಕೆ ಮಾರಕ. ಹಾಗಾಗಿ ಆಲೂಗಡ್ಡೆಯನ್ನು ಕೂಡ ಅತಿಯಾಗಿ ಬೇಯಿಸಬಾರದು.
ಮೊಟ್ಟೆ
ಹೆಚ್ಚಿನ ಉರಿಯಲ್ಲಿ ಮೊಟ್ಟೆಗಳನ್ನು ಬೇಯಿಸಬಾರದು. ಹೆಚ್ಚಿನ ಉರಿಯಲ್ಲಿ ಬೇಯಿಸಿದ ಮೊಟ್ಟೆ ಸೇವಿಸುವುದರಿಂದ ಕ್ಯಾನ್ಸರ್‌ಕಾರಕ ಅಂಶಗಳು ಬಿಡುಗಡೆಯಾಗುತ್ತವೆ. ಹಾಗಾಗಿ ಮೊಟ್ಟೆಯನ್ನು ಕೂಡ ಮಧ್ಯಮ ಉರಿಯಲ್ಲಿ ಬೇಯಿಸಿ ತಿನ್ನಬೇಕು.
ಮೀನು
ಮೀನನ್ನು ಅತಿಯಾಗಿ ಬೇಯಿಸಿದರೆ ಅದರಿಂದ ಹಾನಿಕಾರಕ ರಾಸಾಯನಿಕಗಳು ಹೊರಬರಲು ಪ್ರಾರಂಭಿಸುತ್ತವೆ. ವಿಶೇಷವಾಗಿ ಅದನ್ನು ಗ್ರಿಲ್ ಮಾಡುತ್ತಿದ್ದರೆ ಹೆಚ್ಚಿನ ತಾಪಮಾನದಲ್ಲಿ ಬೇಯಿಸಬೇಡಿ ಅಥವಾ ಹೆಚ್ಚು ಫ್ರೈ ಮಾಡಬೇಡಿ. ಮೀನನ್ನು ಸ್ಟೀಮ್ ಮಾಡಿ ತಿನ್ನುವುದು ಸೂಕ್ತ.
ಬ್ರೆಡ್
ಬ್ರೆಡ್ ಅನ್ನು ಅತಿಯಾಗಿ ಬೇಯಿಸುವುದು ಅಕ್ರಿಲಾಮೈಡ್ ರಚನೆಗೆ ಕಾರಣವಾಗುತ್ತದೆ. ಆದ್ದರಿಂದ ಬ್ರೆಡ್ ಅನ್ನು ಕೂಡ ಹದವಾಗಿಯೇ ಬೇಯಿಸಿ ತಿನ್ನಬೇಕು.
ಸಂಸ್ಕರಿಸಿದ ಮಾಂಸ
ಬೇಕನ್‌ನಂತಹ ಸಂಸ್ಕರಿಸಿದ ಮಾಂಸವನ್ನು ಅತಿಯಾಗಿ ಬೇಯಿಸುವುದು ಕಾರ್ಸಿನೋಜೆನ್‌ಗಳನ್ನು ಉಂಟುಮಾಡಬಹುದು. ಆದ್ದರಿಂದ ಅವುಗಳನ್ನು ಕಡಿಮೆ ಉರಿಯಲ್ಲಿ ಬೇಯಿಸಿ.
ಕರಿದ ಎಣ್ಣೆಯ ಮರುಬಳಕೆ
ಕರಿದ ಎಣ್ಣೆಯನ್ನು ಮರುಬಳಕೆ ಮಾಡುವುದರಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. ಏಕೆಂದರೆ ಹೀಗೆ ಮಾಡುವುದರಿಂದ ಎಣ್ಣೆಯಲ್ಲಿ ಹಾನಿಕಾರಕ ಸಂಯುಕ್ತಗಳು ರೂಪುಗೊಳ್ಳುತ್ತವೆ. ಹೆಚ್ಚಿನ ಸ್ಮೋಕ್ ಪಾಯಿಂಟ್ ಹೊಂದಿರುವ ತೈಲವನ್ನು ಬಳಸುವುದು ಸೂಕ್ತ. ಅದನ್ನು ಫಿಲ್ಟರ್ ಮಾಡಿ, ಫ್ರಿಡ್ಜ್‌ನಲ್ಲಿಡಿ.