ತಿನ್ನೋದು ಮತ್ತು ಕುಡಿಯುವ ವಿಚಾರದಲ್ಲಿ ನಾವು ಎಷ್ಟು ಜಾಗರೂಕರಾಗಿ ಇರುತ್ತೇವೋ ನಮ್ಮ ಆರೋಗ್ಯ ಕೂಡ ಅಷ್ಟೇ ಚೆನ್ನಾಗಿ ಇರುತ್ತದೆ.
ದೇಹದ ಆರೋಗ್ಯ ಕಾಪಾಡುವ ಅನೇಕ ಆಹಾರ ಪದಾರ್ಥಗಳಿವೆ. ಆದರೆ ಯಾವುದರ ಜೊತೆ ಯಾವುದನ್ನ ಸೇವಿಸಿದ್ರೆ ಒಳ್ಳೆಯದು ಅನ್ನೋದನ್ನೂ ನೋಡಬೇಕು.
ಹಾಗಾದರೆ ಯಾವ ಆಹಾರದ ಜೊತೆ ಯಾವುದನ್ನ ಸೇವಿಸಬಾರದು ಅನ್ನೋದಕ್ಕೆ ವಿವರಣೆ ಇಲ್ಲಿದೆ ನೋಡಿ :
1. ಕಿತ್ತಳೆ, ಅನಾನಸ್ ಹಣ್ಣುಗಳನ್ನ ಮೊಸರು ಇಲ್ಲವೇ ಲಸ್ಸಿ ಜೊತೆ ಸೇವಿಸಬೇಡಿ.
2. ನೀವು ಹಲಸಿನ ಹಣ್ಣನ್ನ ಸೇವಿಸಿದ್ರೆ ಕೂಡಲೇ ವೀಳ್ಯದೆಲೆಯನ್ನ ಸೇವಿಸೋಕೆ ಹೋಗಬೇಡಿ.
3. ಕೆಲವರು ಮೊಸರಿನ ಜೊತೆಯಲ್ಲಿ ಹಣ್ಣನ್ನ ಸೇವಿಸುತ್ತಾರೆ. ಕನಿಷ್ಟ ಅಂದರೆ ಒಂದೂವರೆ ತಾಸಾದರೂ ಮೊಸರು ತಿಂದ ಬಳಿಕ ಹಣ್ಣನ್ನ ಮುಟ್ಟೋಕೆ ಹೋಗಬೇಡಿ. ಇದರಿಂದ ಶೀತ, ಕಫ ಉಂಟಾಗೋ ಸಾಧ್ಯತೆ ಇದೆ.
4. ಹುಳಿ ಪದಾರ್ಥಗಳ ಜೊತೆ ಹಾಲನ್ನ ಸೇವಿಸಲೇಬೇಡಿ. ಕಲ್ಲಂಗಡಿ ಹಣ್ಣನ್ನ ಎಂದಿಗೂ ಹಾಲಿನ ಜೊತೆ ತಿನ್ನಬೇಡಿ.
5. ಮೊಸರು, ಉಪ್ಪು, ಮಸಾಲೆಯುಕ್ತ ಪದಾರ್ಥ, ಮೂಲಂಗಿ, ಮೂಲಂಗಿ ಎಲೆ, ಹುಣಸೆ ಹಣ್ಣು, ನಿಂಬೆ, ನೆಲ್ಲಿಕಾಯಿ ಇತ್ಯಾದಿ ಆಹಾರ ಪದಾರ್ಥಗಳನ್ನ ಹಾಲಿನ ಜೊತೆ ಸೇವಿಸಬೇಡಿ.