ಮೃತರ ಆತ್ಮಕ್ಕೆ ಶಾಂತಿ ನೀಡಲು ಶ್ರಾದ್ಧ, ಪಿಂಡ ದಾನ, ತರ್ಪಣವನ್ನು ಬಿಡಲಾಗುತ್ತದೆ. ಪಿತೃ ಪಕ್ಷದಲ್ಲಿ ಪೂರ್ವಜರ ಆತ್ಮಕ್ಕೆ ಶಾಂತಿ ಕೋರಲು ಜನರು ಶ್ರಾದ್ಧ ಮಾಡ್ತಾರೆ. ಇದ್ರಿಂದ ಪೂರ್ವಜರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
ಗರುಡ ಪುರಾಣದ ಪ್ರಕಾರ, ಸಾವಿನ ಸಂದರ್ಭದಲ್ಲಿ ಕೆಲ ವಸ್ತುಗಳು ಮೃತರ ಬಳಿ ಇದ್ದರೂ ಅವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ.
- ತುಳಸಿಗೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ವ್ಯಕ್ತಿ ಸಾವನ್ನಪ್ಪುವ ಸಂದರ್ಭದಲ್ಲಿ ತುಳಸಿ ಗಿಡ ಹತ್ತಿರವಿದ್ದರೆ ಆತನಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಹಾಗೆಯೇ ತುಳಸಿ ಎಲೆಯನ್ನು ಸಾವನ್ನಪ್ಪುತ್ತಿರುವ ವ್ಯಕ್ತಿಯ ಬಾಯಿ ಮತ್ತು ಹಣೆ ಮೇಲೆ ಇಟ್ಟರೆ ನರಕದ ಬದಲು ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.
- ತುಳಸಿಯಷ್ಟೆ ಹಿಂದೂ ಧರ್ಮದಲ್ಲಿ ಗಂಗಾಜಲಕ್ಕೆ ಮಹತ್ವವಿದೆ. ಅದನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡಲಾಗುತ್ತದೆ. ವ್ಯಕ್ತಿ ಸಾಯುವ ಸಂದರ್ಭದಲ್ಲಿ ಆತನ ಬಾಯಿಗೆ ಗಂಗಾಜಲ ಅರ್ಪಿಸಿದ್ರೆ ಆತ ಸ್ವರ್ಗ ಸೇರುತ್ತಾನೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಗಂಗಾಜಲ ಪಾಪಗಳನ್ನು ಕಳೆದು ಪುಣ್ಯ ಪ್ರಾಪ್ತಿ ಮಾಡುತ್ತದೆ. ಚಿತಾಭಸ್ಮವನ್ನು ಗಂಗೆ ನೀರಿನಲ್ಲಿ ಬಿಟ್ಟರೂ ಸ್ವರ್ಗ ಸಿಗಲಿದೆ ಎಂದು ನಂಬಲಾಗಿದೆ.
- ಸಾವು ಹತ್ತಿರವಾಗ್ತಿದೆ ಎಂಬ ವ್ಯಕ್ತಿಯಿಂದ ಕಪ್ಪು ಎಳ್ಳನ್ನು ದಾನ ಮಾಡಿಸಬೇಕು ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ವ್ಯಕ್ತಿ ಕಪ್ಪು ಎಳ್ಳನ್ನು ದಾನ ಮಾಡಿದ್ರೆ ಆತನ ಆತ್ಮಕ್ಕೆ ಶಾಂತಿ ಸಿಗುತ್ತದೆ. ಆತ ಭೂತವಾಗಿ ಅಲೆಯುವುದಿಲ್ಲ. ಸಾಯುತ್ತಿರುವ ವ್ಯಕ್ತಿ ತಲೆ ಮೇಲೆ ಕಪ್ಪು ಎಳ್ಳನ್ನು ಇಟ್ಟರೆ ಆತನಿಗೆ ಸ್ವರ್ಗ ಲಭಿಸುತ್ತದೆ ಎಂದು ಪುರಾಣದಲ್ಲಿ ಹೇಳಲಾಗಿದೆ.