ಮನೆ ಅಂದ್ಮೇಲೆ ಕನ್ನಡಿಯನ್ನು ಇಡಲಾಗುತ್ತೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇಡಲಾಗುವ ಕನ್ನಡಿ ಕೂಡ ಶುಭ ಮತ್ತು ಅಶುಭ ಫಲವನ್ನು ನೀಡುತ್ತದೆ. ಮನೆಯಲ್ಲಿ ಕನ್ನಡಿಗಳನ್ನು ಇಡುವ ವೇಳೆ ಕೆಲ ವಾಸ್ತು ನಿಯಮಗಳನ್ನು ಪಾಲಿಸಬೇಕು. ವಾಸ್ತು ಪ್ರಕಾರ ಕನ್ನಡಿಯನ್ನು ಇಟ್ಟರೆ ಅದು ಮಂಗಳಕರ ಪರಿಣಾಮವನ್ನು ಬೀರುತ್ತದೆ. ಆದರೆ ಕನ್ನಡಿಗಳನ್ನು ತಪ್ಪು ದಿಕ್ಕಿನಲ್ಲಿ ಇಟ್ಟರೆ ಅದು ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ತರುತ್ತದೆ. ಜೊತೆಗೆ ಮನೆಯಲ್ಲಿ ನಕಾರಾತ್ಮ ಶಕ್ತಿ ನೆಲೆಸಲು ಕಾರಣವಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿರುವ ಗೋಡೆ ಮೇಲೆ ಕನ್ನಡಿಗಳನ್ನು ಇಡಬಾರದು. ಈ ದಿಕ್ಕಿಗೆ ಇಟ್ಟಿರುವ ಕನ್ನಡಿಯಲ್ಲಿ ನಮ್ಮ ಮುಖವನ್ನು ನೋಡುವುದ್ರಿಂದ ಕೆಟ್ಟ ಪರಿಣಾಮ ಬೀರುತ್ತದೆ. ಮನೆಯಲ್ಲಿ ಅಪಶ್ರುತಿಯ ಸಮಸ್ಯೆ ಶುರುವಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಕನ್ನಡಿಯನ್ನು ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿಗೆ ಇಡಬೇಕು. ಈ ದಿಕ್ಕಿಗೆ ಕನ್ನಡಿ ಇಡುವುದರಿಂದ ಮನೆಯಲ್ಲಿ ಸುಖ ಸಂತೋಷ ಪ್ರಾಪ್ತಿಯಾಗುತ್ತದೆ.
ವಾಸ್ತು ಪ್ರಕಾರ ಒಡೆದ ಕನ್ನಡಿಯನ್ನು ಮನೆಯಲ್ಲಿ ಇಡಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕನ್ನಡಿ ಸ್ವಚ್ಛತೆ ಬಗ್ಗೆಯೂ ಗಮನ ನೀಡಬೇಕು. ಕೊಳಕು ಕನ್ನಡಿ ಕೂಡ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿಸುತ್ತದೆ. ಮಲಗುವ ಕೋಣೆಯಲ್ಲಿ ಇರುವ ಕನ್ನಡಿ ಮೇಲೆ ಯಾವಾಗ್ಲೂ ಬಟ್ಟೆ ಹಾಕಬೇಕು.
ಬಾತ್ ರೂಂನಲ್ಲಿ ಯಾವತ್ತೂ ಕನ್ನಡಿಯನ್ನು ಬಾಗಿಲಿನ ಮುಂದೆ ಇಡಬಾರದು. ಇದು ಕೂಡ ವಾಸ್ತು ದೋಷಕ್ಕ ಕಾರಣವಾಗುತ್ತದೆ. ಎರಡು ಕನ್ನಡಿಯನ್ನು ಎದುರು ಬದುರು ಇಡಬಾರದು. ಹಾಗೆಯೇ ಎಂದಿಗೂ ಅಡುಗೆ ಮನೆಯಲ್ಲಿ ಕನ್ನಡಿಯನ್ನು ಇಡಬೇಡಿ.