![](https://kannadadunia.com/wp-content/uploads/2020/11/photo-1593642632559-0c6d3fc62b89.jpg)
ನೀವು ವ್ಯವಹಾರ ನಡೆಸುವ ಕಚೇರಿಗಳಿಗೂ ಕೂಡ ವಾಸ್ತು ತುಂಬಾ ಮುಖ್ಯ. ಕಚೇರಿಯ ನಿರ್ಮಾಣ ಮತ್ತು ಅದರ ಒಳಗಡೆ ಜೋಡಿಸುವ ವಸ್ತುಗಳನ್ನು ಕೂಡ ವಾಸ್ತು ಪ್ರಕಾರ ಜೋಡಿಸಬೇಕು. ಇಲ್ಲವಾದರೆ ನಿಮ್ಮ ವ್ಯವಹಾರ ಸರಿಯಾಗಿ ನಡೆಯದೆ ನಷ್ಟವಾಗಬಹುದು.
ಕಚೇರಿಯ ಕ್ಯಾಬಿನ್ ನಲ್ಲಿ ನೀವು ಕುಳಿತುಕೊಳ್ಳುವ ಸ್ಥಳ ಅಂದರೆ ನಿಮ್ಮ ಮೇಜು ಮತ್ತು ಕುರ್ಜಿ ಇರುವ ಸ್ಥಳದಲ್ಲಿ ನಿಮ್ಮ ಕಣ್ಣಿಗೆ ನೇರವಾಗಿ ಕ್ಯಾಬಿನ್ ನ ಬಾಗಿಲು ಕಾಣಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಹೀಗೆ ಇರಬಾರದು. ಆಗ ನೀವು ಅದನ್ನು ಬದಲಾಯಿಸಬೇಕಾಗುತ್ತದೆ.
ಒಂದು ವೇಳೆ ನಿಮಗೆ ಆ ಸ್ಥಳ ಬದಲಾಯಿಸಲು ಇಷ್ಟವಿಲ್ಲದಿದ್ದರೆ ಕ್ಯಾಬಿನ್ ನ ಉತ್ತರ ದಿಕ್ಕಿಗೆ ಕನ್ನಡಿ ಹಾಕಬೇಕು. ಅದರಲ್ಲಿ ನೀವು ಬಾಗಿಲಿನ ಚಿತ್ರವನ್ನು ನೋಡುತ್ತೀರಿ. ಇದರಿಂದ ಬಾಗಿಲು ನಿಮ್ಮ ಮುಂದೆ ಇದ್ದರೂ ಅದು ನಿಮ್ಮ ಮೇಲೆ ನಕರಾತ್ಮಕ ಪ್ರಭಾವ ಬೀರುವುದಿಲ್ಲ.