ಮನೆ ಅಂದ್ಮೇಲೆ ಜಗಳ ಕಾಮನ್. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆಯಿದೆ. ಆದ್ರೆ ಕೆಲವೊಮ್ಮೆ ಸಣ್ಣ ವಿಷ್ಯ ಕೂಡ ವಿಚ್ಛೇದನಕ್ಕೆ ಕಾರಣವಾಗುತ್ತದೆ. ಪತಿ-ಪತ್ನಿ ಜಗಳ ಕಡಿಮೆ ಮಾಡಲು ಲಾಲ್ ಕಿತಾಬ್ ಮತ್ತು ಜ್ಯೋತಿಷ್ಯದಲ್ಲಿ ಕೆಲವು ಪರಿಹಾರಗಳನ್ನು ಹೇಳಲಾಗಿದೆ.
ಶಾಸ್ತ್ರದ ಪ್ರಕಾರ ಶುಕ್ರವಾರದಂದು ಹೆಣ್ಣು ಮಗುವಿಗೆ ಸಿಹಿ ತಿನ್ನಿಸುವುದರಿಂದ ಸಂಗಾತಿಯೊಂದಿಗಿನ ಸಂಬಂಧ ಗಟ್ಟಿಯಾಗುತ್ತದೆ. ಕನಿಷ್ಠ 11 ಶುಕ್ರವಾರದವರೆಗೆ ಇದನ್ನು ಮಾಡಬೇಕು. ನಿಮ್ಮ ಸಂಸಾರದ ವಿಷಯದಲ್ಲಿ ಬೇರೆಯವರು ಬರದಂತೆ ನೋಡಿಕೊಳ್ಳಿ. ಇದರಿಂದ ಬಹಳಷ್ಟು ಜಗಳಗಳು ಕಡಿಮೆಯಾಗುತ್ತವೆ.
ವಾದವಿವಾದದಲ್ಲಿ ಸಣ್ಣ ಸಮಸ್ಯೆಗಳಿದ್ದರೆ ಯಾರಾದರೊಬ್ಬರು ಸೋಲುವುದು ಉತ್ತಮ. ಒಬ್ಬರು ಕೋಪಗೊಂಡಾಗ ಇನ್ನೊಬ್ಬರು ಶಾಂತವಾಗಿದ್ದರೆ, ಇದರಿಂದ ಹೆಚ್ಚಿನ ಮನಸ್ತಾಪ ಇರುವುದಿಲ್ಲ.
ರಾತ್ರಿ ಮಲಗುವಾಗ ಹೆಂಡತಿಯು ಗಂಡನ ಹಣೆಗೆ ಸಿಂಧೂರ ಇಡಬೇಕು. ಮರುದಿನ ಪತಿ ಆ ಸಿಂಧೂರವನ್ನು ಮನೆಯ ಹೊರಗೆ ಹಾಕಬೇಕು. ಇದು ಕೂಡ ಸಂಬಂಧ ಗಟ್ಟಿಗೊಳಿಸುತ್ತದೆ.
ಹಸನ್ಮುಖಿಯಾಗಿ ಕುಳಿತಿರುವ ಶಿವ-ಪಾರ್ವತಿಯರ ಮೂರ್ತಿ ಅಥವಾ ಫೋಟೊದ ಮುಂದೆ ಪ್ರತಿನಿತ್ಯ ತುಪ್ಪದ ದೀಪ ಹಚ್ಚಿ. ಇದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ.