ದೇವರ ಅನುಗ್ರಹ ಬಯಸುವ ಪ್ರತಿಯೊಬ್ಬರು ಮನೆಯಲ್ಲಿ ಪೂಜಾ ಕೋಣೆಯನ್ನು ಸುಂದರವಾಗಿ ಇಟ್ಟುಕೊಂಡಿರ್ತಾರೆ. ಶಾಸ್ತ್ರದ ಪ್ರಕಾರ ಪೂಜೆ ಮಾಡುವ ಸ್ಥಳದಲ್ಲಿ 5 ವಸ್ತುಗಳು ಇರಲೇಬೇಕು. ಇವು ಇದ್ದಲ್ಲಿ ಮಾತ್ರ ನಿಮಗೆ ಹಣಕಾಸಿನ ಸಮೃದ್ಧಿ ದೊರೆಯುತ್ತದೆ. ಹಾಗಿದ್ರೆ ಆ 5 ವಸ್ತುಗಳು ಯಾವುವು ಅನ್ನೋದನ್ನು ನೋಡೋಣ.
ಗಂಟೆ : ಗಂಟೆಯ ಸದ್ದು ಮನೆಯಲ್ಲಿ ಸಕಾರಾತ್ಮಕತೆಯನ್ನು ಪಸರಿಸುತ್ತದೆ. ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ಹಾಗಾಗಿ ಪೂಜೆಯ ಸ್ಥಳದಲ್ಲಿ ಗಂಟೆಯನ್ನು ಇಟ್ಟುಕೊಳ್ಳಿ. ಪೂಜೆಗೆ ಬಳಸುವ ಗಂಟೆಯಲ್ಲಿ ಕ್ಯಾಡ್ಮಿಯಂ, ಸೀಸ, ಕಂಚು, ತಾಮ್ರ, ಸತು, ನಿಕ್ಕಲ್ ಮತ್ತು ಮ್ಯಾಂಗನೀಸ್ ಅಂಶವಿರುತ್ತದೆ. ಈ ಗಂಟೆಯ ಸದ್ದು ಮೆದುಳಿನ ಎರಡೂ ಬದಿಯ ಮಧ್ಯೆ ಸಾಮರಸ್ಯ ಮೂಡಿಸುತ್ತದೆ. ಗಂಟೆಯನ್ನು ಸರಿಯಾಗಿ ಬಾರಿಸುವುದರಿಂದ ಅದೃಷ್ಟಕ್ಕೆ ಇರುವ ಅಡ್ಡಿ ದೂರವಾಗುತ್ತದೆ.
ಕಲಶ : ಇದು ಏಳಿಗೆಯ ಸಂಕೇತ. ನೀವು ಕಲಶವನ್ನು ಇಡುವ ಸ್ಥಳದಲ್ಲಿ ಕುಂಕುಮದಿಂದ 8 ಎಸಳುಗಳ ಕಮಲದ ಹೂವನ್ನು ಬಿಡಿಸಿ. ಇದರಿಂದ ಕುಟುಂಬದಲ್ಲಿ ಸಂತೋಷ ಹೆಚ್ಚುತ್ತದೆ.
ಸ್ವಸ್ಥಿಕ್ : ಇದು ಶಕ್ತಿಯ ಸಂಕೇತ. ಅದೃಷ್ಟ ಮತ್ತು ಆರೋಗ್ಯಕ್ಕೂ ಇದು ಪೂರಕವಾಗಿದೆ. ಹಾಗಾಗಿ ಲೋಹದ ಸ್ವಸ್ಥಿಕ್ ಒಂದನ್ನು ಸದಾ ನಿಮ್ಮ ದೇವರ ಕೋಣೆಯಲ್ಲಿ ಇಟ್ಟುಕೊಳ್ಳಿ.
ಶಂಖ : ಸಮುದ್ರ ಮಥನದ ಸಂದರ್ಭದಲ್ಲಿ ಉದ್ಭವಿಸಿದ ಲಕ್ಷ್ಮಿಯ ಆಭರಣ ಶಂಖ. ಲಕ್ಷ್ಮಿಗೆ ಶಂಖ ಅತ್ಯಂತ ಪ್ರಿಯವಾದದ್ದು. ಹಾಗಾಗಿ ಪೂಜಾ ಸ್ಥಳದಲ್ಲಿ ಅದನ್ನು ಇಟ್ಟರೆ ಒಳಿತಾಗುತ್ತದೆ.
ಮಣ್ಣಿನ ದೀಪ : ದೇವರ ಕೋಣೆಯಲ್ಲಿ ಮಣ್ಣಿನ ದೀಪವನ್ನಿಡುವುದು ಅತ್ಯಂತ ಶ್ರೇಷ್ಠ. ದೀಪ ಬೆಳಗಿಸುವ ಮುನ್ನ ಬತ್ತಿಯನ್ನು ತುಪ್ಪದಲ್ಲಿ ಅದ್ದಿ. ದೀಪದಲ್ಲಿ ಸ್ವಲ್ಪ ಬೆಲ್ಲ ಹಾಕಿ. ಇದರಿಂದ ಮನೆಗೆ ಶ್ರೇಯಸ್ಸು ಉಂಟಾಗುತ್ತದೆ.