alex Certify ಇಂತಹ ಅಭ್ಯಾಸಗಳಿದ್ದರೆ ಮಹಿಳೆಗೆ ಸಿಗುವುದಿಲ್ಲ ತಾಯ್ತನದ ಸುಖ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂತಹ ಅಭ್ಯಾಸಗಳಿದ್ದರೆ ಮಹಿಳೆಗೆ ಸಿಗುವುದಿಲ್ಲ ತಾಯ್ತನದ ಸುಖ…!

ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿಯಿಂದ ಬಂಜೆತನದ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಪುರುಷರು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುತ್ತಿದೆ. ಮಹಿಳೆಯರಲ್ಲಿ  ಬಂಜೆತನ ಹೆಚ್ಚಳಕ್ಕೆ ಹಲವು ಕಾರಣಗಳಿವೆ. ಕೆಲವೊಂದು ನಿತ್ಯದ ಅಭ್ಯಾಸಗಳು ಕೂಡ ಫಲವತ್ತತೆಯಲ್ಲಿ ಕುಸಿತವನ್ನು ಉಂಟುಮಾಡುತ್ತದೆ.

ಅನಾರೋಗ್ಯಕರ ಆಹಾರ ಸೇವನೆ

ಆರೋಗ್ಯಕರ ಸಮತೋಲಿತ ಆಹಾರವು ಫಲವತ್ತತೆಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತೂಕ ಹೆಚ್ಚಾಗುವುದು ಅಥವಾ ತೂಕ ನಷ್ಟ ಎರಡೂ ಸಹ ಅಂಡೋತ್ಪತ್ತಿ ಮೇಲೆ ಪರಿಣಾಮ ಬೀರಬಹುದು. ಸಂಸ್ಕರಿಸಿದ ಆಹಾರ, ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬುಗಳ ಹೆಚ್ಚಿನ ಸೇವನೆ ಕೂಡ ಅಂಡೋತ್ಪತ್ತಿಯನ್ನು ಕಡಿಮೆ ಮಾಡುತ್ತದೆ. ಗರ್ಭಾಶಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಧೂಮಪಾನ ಮತ್ತು ಮದ್ಯ ಸೇವನೆ

ಧೂಮಪಾನ ಮತ್ತು ಆಲ್ಕೋಹಾಲ್ ಸೇವನೆಯು ಒಟ್ಟಾರೆ ಆರೋಗ್ಯಕ್ಕೆ ಹಾನಿಕಾರಕ. ಅದರ ಜೊತೆಗೆ ಮಹಿಳೆಯರಲ್ಲಿ ಇದು ಫಲವತ್ತತೆಯನ್ನು ಕಡಿಮೆ ಮಾಡುತ್ತದೆ. ಧೂಮಪಾನವು ಈಸ್ಟ್ರೊಜೆನ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಅಂಡಾಶಯವನ್ನು ಹಾನಿಗೊಳಿಸುತ್ತದೆ. ಅದೇ ರೀತಿ ಮದ್ಯ ಸೇವನೆಯು ಋತುಚಕ್ರವನ್ನು ಅನಿಯಮಿತಗೊಳಿಸುತ್ತದೆ ಮತ್ತು ಗರ್ಭಧಾರಣೆಯ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

ವ್ಯಾಯಾಮದ ಕೊರತೆ

ದೈಹಿಕವಾಗಿ ಸಕ್ರಿಯವಾಗಿರುವುದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಅದೇ ರೀತಿ ಸಂತಾನೋತ್ಪತ್ತಿ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ನಿಯಮಿತ ವ್ಯಾಯಾಮವು ಋತುಚಕ್ರವನ್ನು ನಿಯಂತ್ರಿಸಲು ಮತ್ತು ಗರ್ಭಾಶಯವನ್ನು ಆರೋಗ್ಯಕರವಾಗಿರಿಸಲು ಸಹಕಾರಿ. ಆದಾಗ್ಯೂ ಅತಿಯಾದ ವ್ಯಾಯಾಮವು ಹಾನಿಕಾರಕವಾಗಬಹುದು ಮತ್ತು ಋತುಚಕ್ರವನ್ನು ನಿಲ್ಲಿಸಬಹುದು.

ಹೆಚ್ಚು ಒತ್ತಡ

ಒತ್ತಡದ ಹಾರ್ಮೋನುಗಳು ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು. ಒತ್ತಡವು ಅಂಡೋತ್ಪತ್ತಿ ವಿಳಂಬಕ್ಕೆ ಕಾರಣವಾಗುತ್ತದೆ. ಗರ್ಭಾಶಯದ ಒಳಪದರವನ್ನು ತೆಳುವಾಗಿಸುತ್ತದೆ. ಇದರಿಂದ  ಗರ್ಭಧಾರಣೆ ಕಷ್ಟಕರವಾಗುತ್ತದೆ.

ಅನಿಯಮಿತ ಮುಟ್ಟನ್ನು ನಿರ್ಲಕ್ಷಿಸುವುದು

ಅನಿಯಮಿತ ಅಥವಾ ನೋವಿನ ಮುಟ್ಟು ಬಂಜೆತನಕ್ಕೆ ಕಾರಣವಾಗುವ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ನಂತಹ ಪರಿಸ್ಥಿತಿಗಳು ಋತುಚಕ್ರದ ಮೇಲೆ ಪರಿಣಾಮ ಬೀರುತ್ತವೆ. ಗರ್ಭಧರಿಸುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಹಾಗಾಗಿ ಮುಟ್ಟಿನ ಸಮಸ್ಯೆಗಳನ್ನು ನಿರ್ಲಕ್ಷಿಸದೇ ವೈದ್ಯರನ್ನು ಸಂಪರ್ಕಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...