ಕೆಲವೊಮ್ಮೆ ಅಡುಗೆ ಮಾಡುವಾಗ ಕೆಲವು ತಪ್ಪುಗಳು ಸಂಭವಿಸುತ್ತದೆ. ಕೆಲವೊಮ್ಮೆ ಅಡುಗೆ ಮಾಡುವಾಗ ಉಪ್ಪು, ಹುಳಿ, ಖಾರ, ಸಿಹಿ ಹೆಚ್ಚಾಗುತ್ತದೆ. ಆದರೆ ತರಕಾರಿಗಳನ್ನು ಬಳಸಿ ಅಡುಗೆ ಮಾಡುವಾಗ, ತರಕಾರಿ ಬೇಯುತ್ತಿರುವಾಗ ಹೆಚ್ಚು ನೀರು ಬಿಡುತ್ತದೆ. ಹಾಗಾಗಿ ಈ ನೀರನ್ನು ಸರಿಪಡಿಸಲು ಈ ಸಲಹೆಯನ್ನು ಪಾಲಿಸಿ.
ತರಕಾರಿಗಳಲ್ಲಿ ಹೆಚ್ಚು ನೀರು ಇದ್ದರೆ ನಂತರ ಅದಕ್ಕೆ ಹಿಟ್ಟನ್ನು ಸೇರಿಸಿ. 1 ಚಮಚ ಹಿಟ್ಟನ್ನು ನೀರಿನಲ್ಲಿ ಕರಗಿಸಿ ಗ್ರೇವಿಗೆ ಸೇರಿಸಿ. ಅದಕ್ಕಾಗಿ ನೀವು ಕಡಲೆಹಿಟ್ಟು ಅಥವಾ ಗೋಧಿ ಹಿಟ್ಟನ್ನು ಬಳಸಬಹುದು. ಇದರಿಂದ ಗ್ರೇವಿ ದಪ್ಪವಾಗುತ್ತದೆ.
ಗ್ರೇವಿಯಲ್ಲಿ ನೀರು ಹೆಚ್ಚಾದಾಗ ಅದರಲ್ಲಿ ಹಿಟ್ಟನ್ನು ಬೆರೆಸಿದಾಗ ಗ್ರೇವಿಯನ್ನು ಕಡಿಮೆ ಉರಿಯಲ್ಲಿ ಕುದಿಸಿ. ಇಲ್ಲವಾದರೆ ಇದರಿಂದ ಆರೋಗ್ಯ ಸಮಸ್ಯೆ ಕಾಡಬಹುದು. ಹಾಗೇ ಗ್ರೇವಿಗೆ ಉಪ್ಪನ್ನು ಕೂಡ ಸೇರಿಸಿ. ಇಲ್ಲವಾದರೆ ಗ್ರೇವಿಯ ರುಚಿ ಬದಲಾಗುತ್ತದೆ.