ವಾಸ್ತುಶಾಸ್ತ್ರದಲ್ಲಿ ಪ್ರತಿಯೊಂದು ದಿಕ್ಕಿಗೂ ತನ್ನದೇ ಮಹತ್ವ ಮತ್ತು ಶಕ್ತಿ ಇದೆ. ಹಾಗಾಗಿ ಮನೆಯಲ್ಲಿ ಪ್ರತಿಯೊಂದು ವಸ್ತುವನ್ನೂ ಸರಿಯಾದ ದಿಕ್ಕಿನಲ್ಲಿಯೇ ಇಡಬೇಕು. ತಪ್ಪಾದ ಸ್ಥಳದಲ್ಲಿ ಇರಿಸಿದರೆ ಅದು ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಡಸ್ಟ್‌ಬಿನ್ ಅಥವಾ ಕಸದ ಬುಟ್ಟಿ ಪ್ರತಿ ಮನೆಯಲ್ಲೂ ಇರುತ್ತದೆ. ಕಸದ ಬುಟ್ಟಿಯನ್ನು ತಪ್ಪಾದ ಸ್ಥಳದಲ್ಲಿ ಇರಿಸಿದರೆ ಹಾನಿ ಖಚಿತ. ವಾಸ್ತು ಶಾಸ್ತ್ರದಲ್ಲಿ ಡಸ್ಟ್‌ಬಿನ್ ಇಡುವ ಕುರಿತು ಕೆಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಇವುಗಳನ್ನು ಅನುಸರಿಸದಿದ್ದರೆ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ.
ಈ ದಿಕ್ಕಿನಲ್ಲಿ ಡಸ್ಟ್‌ಬಿನ್ ಇಡಬೇಡಿ!
ಮನೆಯಲ್ಲಿ ಕಸದ ಬುಟ್ಟಿಯನ್ನು ತಪ್ಪಾದ ಸ್ಥಳದಲ್ಲಿ ಇಟ್ಟರೆ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಮನೆಯ ಯಜಮಾನ ಆರ್ಥಿಕ ಬಿಕ್ಕಟ್ಟಿನಿಂದ ಬಳಲಬಹುದು. ಹಾಗಾಗಿ ಮನೆಯ ಈಶಾನ್ಯ ದಿಕ್ಕಿನಲ್ಲಿ ಕಸದ ಬುಟ್ಟಿಯನ್ನು ಇಡಬೇಡಿ. ಈಶಾನ್ಯ ದಿಕ್ಕಿನಲ್ಲಿ ಡಸ್ಟ್‌ಬಿನ್ ಇಟ್ಟರೆ ಮನೆಯ ಸದಸ್ಯರಲ್ಲಿ ಒತ್ತಡ, ಚಡಪಡಿಕೆ ಮತ್ತು ಅಶಾಂತಿ ಉಂಟಾಗುತ್ತದೆ. ಮನೆಯ ಮುಖ್ಯಸ್ಥರು ಯಾವಾಗಲೂ ಚಿಂತೆಯಲ್ಲಿರುತ್ತಾರೆ.
ಮನೆಯ ಆಗ್ನೇಯ ದಿಕ್ಕಿನಲ್ಲಿ ಕಸದ ಬುಟ್ಟಿ ಇಡುವುದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ. ಅಂತಹ ಮನೆಯಲ್ಲಿ ಹಣವು ಎಂದಿಗೂ ಉಳಿಯುವುದಿಲ್ಲ. ಉಳಿತಾಯವೂ ಖಾಲಿಯಾಗಿ, ಸಾಲದ ಹೊರೆ ಹೆಚ್ಚುತ್ತಲೇ ಹೋಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ.
ಕಸದ ಬುಟ್ಟಿಯನ್ನು ಯಾವ ದಿಕ್ಕಿನಲ್ಲಿಡಬೇಕು?
ವಾಸ್ತು ಶಾಸ್ತ್ರದ ಪ್ರಕಾರ ಕಸದ ಬುಟ್ಟಿಯನ್ನು ಯಾವಾಗಲೂ ಮನೆಯ ನೈಋತ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡಬೇಕು. ಮನೆಯ ಕೊಳಕು ಈ ದಿಕ್ಕಿನಿಂದಲೇ ಹೊರ ಬರಬೇಕು. ಡಸ್ಟ್‌ಬಿನ್ ಅನ್ನು ವಾಯುವ್ಯ ದಿಕ್ಕಿನಲ್ಲಿಯೂ ಇಡಬಹುದು. ಡಸ್ಟ್‌ಬಿನ್ ಅನ್ನು ಎಂದಿಗೂ ಮನೆಯ ಹೊರಗೆ ಇಡಬೇಡಿ. ಅದರಲ್ಲೂ ಮನೆಯ ಮುಖ್ಯ ದ್ವಾರದ ಬಳಿ ಕಸದ ಬುಟ್ಟಿ ಇಡುವ ತಪ್ಪನ್ನು ಮಾಡಬೇಡಿ. ಇದಲ್ಲದೇ ಅಡುಗೆ ಕೋಣೆ, ಪೂಜಾ ಕೊಠಡಿ, ಮಲಗುವ ಕೋಣೆಗಳಲ್ಲಿ ಕಸದ ಬುಟ್ಟಿ ಇಡಬಾರದು. ಹಣ ಇರುವ ಜಾಗದಲ್ಲಿ, ತುಳಸಿ ಗಿಡದ ಬಳಿಯಲ್ಲಿ ಕಸದ ಬುಟ್ಟಿ ಇಡುವುದರಿಂದ ತಾಯಿ ಲಕ್ಷ್ಮಿ ಕೋಪಗೊಂಡು ಮನೆ ಬಿಟ್ಟು ಹೋಗುತ್ತಾಳೆ.