ಬೆಂಗಳೂರು : ಕಾವೇರಿ ವಿಚಾರದಲ್ಲಿ ಪರಿಸ್ಥಿತಿ ಕೈ ಮೀರಿದ್ರೆ ರಾಜ್ಯ ಸರ್ಕಾರವೇ ನೇರಹೊಣೆ ಎಂದು ಮಾಜಿ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಆರ್ ಅಶೋಕ್ ಕಾವೇರಿ ವಿಚಾರದಲ್ಲಿ ಸರ್ಕಾರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದೆ. ತಮಿಳುನಾಡಿಗೆ ನೀರು ಹರಿಸಿ ಸೋನಿಯಾಗಾಂಧಿ ತೃಪ್ತಿಪಡಿಸಲು ಮುಂದಾಗಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ, ಡಿಸಿಎಂ ಅವರು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಈಗಿನ ಸ್ಥಿತಿ ಗಮನಿಸಿದರೆ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಸಿಗುವುದು ಕಷ್ಟ. ಇವರಿಗೆ ಆ ಪ್ರಜ್ಞೆಯೇ ಇಲ್ಲ. ಇವರಿಗೆ ಸಂಸತ್ತಿನ ಚುನಾವಣೆಯಲ್ಲಿ ಸ್ಟಾಲಿನ್ ಅವರ ಸಹಕಾರ ಬೇಕಿದೆ. ಸ್ಟಾಲಿನ್ ಕೋಪ ಮಾಡಿಕೊಳ್ತಾರೆ ಎಂದು ಇವರು ಏನೂ ಮಾಡಲಿಲ್ಲ, ವಾದನೂ ಸರಿಯಾಗಿ ಮಾಡಲಿಲ್ಲ, ತಜ್ಞರ ಸಂಪರ್ಕ ಮಾಡಲಿಲ್ಲ ಎಂದು ಮಾಜಿ ಸಚಿವ ಅಶೋಕ್ ಕಿಡಿಕಾರಿದ್ದಾರೆ.