ದೇಹದ ಗುಪ್ತಾಂಗಗಳ ಸಂದು ಗೊಂದುಗಳಲ್ಲಿ ಮೂಡುವ ಕುರ ತಂದಿಡುವ ಸಮಸ್ಯೆಗಳು ಒಂದೆರಡಲ್ಲ. ಗಾತ್ರದಲ್ಲಿ ಮೊಡವೆಗಿಂತ ತುಸು ದೊಡ್ಡದಾಗಿರುವ ಈ ಕುರಗಳು ಅದರ ಹತ್ತು ಪಟ್ಟು ಹೆಚ್ಚು ನೋವು ನೀಡುತ್ತವೆ.
ಹೆಚ್ಚೆಂದರೆ ಬಟಾಣಿಯಷ್ಟು ದೊಡ್ಡದಾಗುವ ಈ ಕುರುಗಳು ಹೆಚ್ಚಾಗಿ ಪೃಷ್ಠದ ಭಾಗದಲ್ಲಿ ಕಾಣಿಸಿಕೊಂಡು ಕುಳಿತುಕೊಳ್ಳಲೂ ಆಗದಷ್ಟು ಹಿಂಸೆ ತಂದೊಡ್ಡುತ್ತವೆ. ಇದಕ್ಕೆ ಮುಖ್ಯ ಕಾರಣ ಎಂದರೆ ಒದ್ದೆಯಾಗಿಯೇ ಉಳಿಯುವ ಗುಪ್ತಾಂಗಗಳು.
ಜಿಮ್ ಗೆ ಹೋಗಿ ಬಂದ ಬಳಿಕ ಒಳ ಉಡುಪುಗಳನ್ನು ಬದಲಾಯಿಸದೆ ಉಳಿಯುವುದರಿಂದ ಅಲ್ಲಿ ಉಳಿಯುವ ಸೂಕ್ಷ್ಮಜೀವಿಗಳು ಹೆಚ್ಚು ಬ್ಯಾಕ್ಟೀರಿಯಾಗಳನ್ನು ಉತ್ಪತ್ತಿ ಮಾಡಿ ಸಣ್ಣ ಗುಳ್ಳೆಗಳಾಗುತ್ತವೆ. ಇವು ಸೋಂಕಾಗಿ ಹರಡಿ ಕ್ರಮೇಣ ಗಾತ್ರ ಹೆಚ್ಚಿಸಿಕೊಳ್ಳುತ್ತದೆ.
ಕೆಲವೊಮ್ಮೆ ಬಿಗಿಯಾದ ಉಡುಪು ಧರಿಸುವುದು, ದೀರ್ಘಕಾಲ ಒಂದೇ ಜಾಗದಲ್ಲಿ ಕುಳಿತಿರುವುದು ಇದಕ್ಕೆ ಕಾರಣವಾಗಬಹುದು. ಬೇಸಗೆಯಲ್ಲಿ ಬೆವರಿ ಬಂದ ಬಳಿಕ ಸ್ನಾನ ಮಾಡುವುದು, ಗುಪ್ತಾಂಗಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು, ಒದ್ದೆಯಾದ ಒಳ ಉಡುಪುಗಳನ್ನು ಧರಿಸದೇ ಇರುವುದು ಇದಕ್ಕೆ ಅತ್ಯುತ್ತಮ ಪರಿಹಾರ.