
ಹಿಂದು ಧರ್ಮದಲ್ಲಿ ಕುಬೇರ ಧನ ವೃದ್ಧಿ ಮಾಡ್ತಾನೆಂದು ನಂಬಲಾಗಿದೆ. ಹಾಗೆ ಚೀನಾದಲ್ಲಿ ಲಾಫಿಂಗ್ ಬುದ್ಧನಿಗೆ ಕುಬೇರನ ಸ್ಥಾನ ನೀಡಲಾಗಿದೆ. ಲಾಫಿಂಗ್ ಬುದ್ಧ, ಸುಖ ಹಾಗೂ ಧನವೃದ್ಧಿ ಮಾಡ್ತಾನೆಂದು ಅಲ್ಲಿಯವರ ನಂಬಿಕೆ. ಅನೇಕರ ಮನೆಯಲ್ಲಿ ಹಾಗಾಗಿಯೇ ಲಾಫಿಂಗ್ ಬುದ್ಧನನ್ನು ಇಡಲಾಗಿದೆ. ಆದ್ರೆ ಎಲ್ಲೆಂದರಲ್ಲಿ ಲಾಫಿಂಗ್ ಬುದ್ದನನ್ನು ಇಡುವುದರಿಂದ ಧನ ವೃದ್ಧಿಯಾಗುವುದಿಲ್ಲ. ದಿಕ್ಕು ಹಾಗೂ ಸ್ಥಳ ಇದರ ಮೇಲೆ ಪರಿಣಾಮ ಬೀರುತ್ತದೆ.
ಮನೆಯ ಮುಖ್ಯದ್ವಾರದ ಎದುರು ಲಾಫಿಂಗ್ ಬುದ್ದನನ್ನು ಇಡಬೇಕು. ಮನೆಯೊಳಗೆ ಪ್ರವೇಶ ಮಾಡುವ ಶಕ್ತಿಗಳಿಗೆ ಈ ಲಾಫಿಂಗ್ ಬುದ್ಧ ಶುಭ ಕೋರುತ್ತದೆ. ಹಾಗಾಗಿ ಮನೆಯ ಮುಖ್ಯದ್ವಾರದ ಬಳಿ ಇಡುವುದು ಒಳ್ಳೆಯದು.
ಮನೆಯಿಂದ ಹೊರಗೆ ಹೋಗುವ ಹಾಗೂ ಒಳಗೆ ಬರುವ ವ್ಯಕ್ತಿಗಳಿಗೆ ಕಾಣುವಂತೆ ಲಾಫಿಂಗ್ ಬುದ್ಧನನ್ನು ಇಡಬೇಕು.
ಎಷ್ಟೇ ದುಡಿದ್ರೂ ಕೈನಲ್ಲಿ ಹಣ ನಿಲ್ಲೋದಿಲ್ಲ, ಆರ್ಥಿಕ ಸಮಸ್ಯೆ ಎದುರಾಗ್ತಿದೆ ಎನ್ನುವವರು ಎರಡೂ ಕೈನಲ್ಲಿ ಕಮಂಡಲ ಹಿಡಿದಿರುವ ಲಾಫಿಂಗ್ ಬುದ್ಧನನ್ನು ಮನೆಯಲ್ಲಿಡಿ.
ಸಂತಾನಹೀನ ದಂಪತಿ ಮಗುವಿನಂತಿರುವ ಲಾಫಿಂಗ್ ಬುದ್ಧನನ್ನು ಮನೆಯಲ್ಲಿಡಿ. ಶೀಘ್ರದಲ್ಲಿಯೇ ನಿಮ್ಮ ಮನೆಗೊಂದು ಮಗು ಬರಲಿದೆ.