ಹೆಚ್ಚಿನವರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದನ್ನು ನಿಯಂತ್ರಿಸದಿದ್ದರೆ ಇದರಿಂದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ದೇಹದ ಅಂಗಗಳನ್ನು ದುರ್ಬಲಗೊಳಿಸುತ್ತದೆ. ಅದು ಯಾವುದು ಎಂಬುದನ್ನು ತಿಳಿದುಕೊಳ್ಳಿ.
*ಬುದ್ದಿಮಾಂದ್ಯತೆ : ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಮೆದುಳಿಗೆ ರಕ್ತ ಸರಿಯಾಗಿ ಪೂರೈಕೆಯಾಗುವುದಿಲ್ಲ. ಇದು ಬುದ್ದಿಮಾಂದ್ಯತೆ ಸಮಸ್ಯೆಗೆ ಕಾರಣವಾಗಬಹುದು.
*ಮೂತ್ರಪಿಂಡ ವೈಫಲ್ಯ : ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಮೂತ್ರ ಪಿಂಡದ ಮೇಲೆ ಅಧಿಕ ಪರಿಣಾಮ ಬೀರುವುದರಿಂದ ಮೂತ್ರಪಿಂಡ ವೈಫಲ್ಯವಾಗಬಹುದು.
*ಅಧಿಕ ರಕ್ತದೊತ್ತಡ ಕಣ್ಣುಗಳಿಗೆ ರಕ್ತವನ್ನು ವರ್ಗಾಯಿಸುವ ರಕ್ತನಾಳಗಳನ್ನು ಹಾನಿಗೊಳಿಸಬಹುದು. ಇದರಿಂದ ನಿಮಗೆ ದೃಷ್ಟಿ ಸಮಸ್ಯೆ ಕಾಡಬಹುದು. ನಿಮ್ಮ ದೃಷ್ಟಿ ಮಂದವಾಗಬಹುದು.
*ಮೂಳೆ ನಷ್ಟ : ಅಧಿಕ ರಕ್ತದೊತ್ತಡದಿಂದ ಕ್ಯಾಲ್ಸಿಯಂ ಅಂಶವು ಮೂತ್ರ ವಿಸರ್ಜನೆಯ ಮೂಲಕ ದೇಹದಿಂದ ಹೊರಹೋಗುತ್ತದೆ. ಇದರಿಂದ ಮೂಳೆಗಳಲ್ಲಿ ಕ್ಯಾಲ್ಸಿಯಂ ಸಮಸ್ಯೆ ಉಂಟಾಗಿ ಮೂಳೆ ದುರ್ಬಲವಾಗಬಹುದು.