ಸಮತೋಲನ ಆಹಾರ ಹಾಗೂ ವ್ಯಾಯಾಮದ ಕೊರತೆ ನಮ್ಮ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ವಯಸ್ಸಿಗಿಂತ ಮೊದಲೇ ಕೂದಲು ಬೆಳ್ಳಗಾಗುತ್ತದೆ. ಸಣ್ಣ ಸಣ್ಣ ಸಮಸ್ಯೆಗೆ ನಾವು ತಿನ್ನುವ ಔಷಧಿ ಹಾಗೂ ಡಯಟ್ ನಲ್ಲಿ ಬದಲಾವಣೆ ಮಾಡುವುದ್ರಿಂದ ನಮ್ಮ ಕೂದಲು ಬೇಗ ಬೆಳ್ಳಗಾಗುತ್ತದೆ.
ನಮ್ಮ ಆರೋಗ್ಯ ನಮ್ಮ ಕೈನಲ್ಲಿ ಎನ್ನುವಂತೆ ನಮ್ಮ ಕೂದಲ ಸಮಸ್ಯೆಗೂ ನಾವೇ ಪರಿಹಾರ ಕಂಡುಕೊಳ್ಳಬೇಕು. ನಮ್ಮ ಜೀವನಶೈಲಿಯಲ್ಲಿ ನಾವು ಮಾಡುವ ಸಣ್ಣ-ಪುಟ್ಟ ಬದಲಾವಣೆಯಿಂದಾಗಿ ವಯಸ್ಸಿಗಿಂತ ಮೊದಲೇ ಕೂದಲು ಬೆಳ್ಳಗಾಗುವುದನ್ನು ತಪ್ಪಿಸಬಹುದು.
ಆಹಾರದಲ್ಲಿ ಹಸಿರು ತರಕಾರಿ ಹಾಗೂ ಎಲೆಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಇದ್ರಲ್ಲಿ ವಿಟಮಿನ್ ಬಿ 6 ಹಾಗೂ ವಿಟಮಿನ್ ಬಿ 12 ಇರುತ್ತದೆ. ಇದು ಕೂದಲಿಗೆ ಪೌಷ್ಠಿಕಾಂಶ ನೀಡುತ್ತದೆ. ವಯಸ್ಸಿಗಿಂತ ಮೊದಲೇ ಕೂದಲು ಬೆಳ್ಳಗಾಗುವುದನ್ನು ತಪ್ಪಿಸುತ್ತದೆ.
ಬೆಳಗಿನ ತಿಂಡಿ ಜೊತೆ ನಿಯಮಿತವಾಗಿ ನಾಲ್ಕು ಬಾದಾಮಿಯನ್ನು ತಿನ್ನಿ. ಇದು ಕೂದಲು ಬೆಳ್ಳಗಾಗುವುದನ್ನು ತಪ್ಪಿಸುತ್ತದೆ. ಜೊತೆಗೆ ಕೂದಲು ಬಲಗೊಂಡು ಹೊಳೆಯುತ್ತದೆ.
ಡಾರ್ಕ್ ಚಾಕೋಲೇಟ್ ನಲ್ಲಿಯೂ ಪೌಷ್ಠಿಕಾಂಶ ಸಿಗುತ್ತದೆ. ಕೂದಲು ಕಪ್ಪಗಾಗಿ ದಟ್ಟವಾಗಿ ಬೆಳೆಯಲು ಇದು ಸಹಾಯ ಮಾಡುತ್ತದೆ.
ಮಾಂಸಹಾರಿಗಳು ನೀವಾಗಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಮೀನನ್ನು ತಿನ್ನಿ. ಇದು ಕೂದಲನ್ನು ಬಲಗೊಳಿಸಿ ಬೆಳ್ಳಗಾಗುವುದನ್ನು ತಡೆಯುತ್ತದೆ.
ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಸೇವನೆ ಮಾಡಿ. ಹಾಲು, ಮೊಸರು, ತುಪ್ಪ, ಚೀಸ್ ನಲ್ಲಿ ವಿಟಮಿನ್ ಬಿ ಹೇರಳವಾಗಿರುತ್ತದೆ. ಕೂದಲಿಗೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಸಿಗುವಂತೆ ಮಾಡಿ ಕೂದಲನ್ನು ಪೋಷಿಸುತ್ತದೆ.
ಮಾಂಸ, ಮೊಟ್ಟೆ, ಹಣ್ಣುಗಳು ಹಾಗೂ ಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿ. ಇದ್ರಲ್ಲಿ ಕೊಬ್ಬು ಹಾಗೂ ಪೋಷಕಾಂಶ ಹೆಚ್ಚಿನ ಪ್ರಮಾಣದಲ್ಲಿರುವುದ್ರಿಂದ ಕೂದಲು ಬೆಳ್ಳಗಾಗದೆ ಆರೋಗ್ಯವಾಗಿರುತ್ತದೆ.