alex Certify ಅತಿಥಿಗೆ ತಣ್ಣನೆ ʼನೀರುʼ ನೀಡಿದ್ರೆ ದೂರವಾಗುತ್ತೆ ಈ ದೋಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿಥಿಗೆ ತಣ್ಣನೆ ʼನೀರುʼ ನೀಡಿದ್ರೆ ದೂರವಾಗುತ್ತೆ ಈ ದೋಷ

 

The Refreshing Benefits of Drinking Cold Water: Fact or Fiction? - Quench  Buggyದೇವರ ಪೂಜೆ ಜೊತೆಗೆ ಕೆಲವೊಂದು ನಂಬಿಕೆಗಳು ಅನಾದಿ ಕಾಲದಿಂದ ನಡೆದುಕೊಂಡು ಬಂದಿವೆ. ಈ ಮೂಲಕ ಕೂಡ ಭಗವಂತನನ್ನು ಪ್ರಸನ್ನಗೊಳಿಸಬಹುದು.

ಮನೆಗೆ ಅತಿಥಿ ಬಂದಾಗ ಅವರಿಗೆ ಅವಶ್ಯವಾಗಿ ತಣ್ಣನೆ ನೀರನ್ನು ನೀಡಬೇಕು. ಇದ್ರಿಂದ ರಾಹು ಗ್ರಹದ ದೋಷ ದೂರವಾಗುತ್ತದೆ. ಜಾತಕದಲ್ಲಿ ಕಾಳ ಸರ್ಪದ ದೋಷವಿದ್ದವರು ಇದ್ರ ಬಗ್ಗೆ ಹೆಚ್ಚಿನ ಗಮನ ನೀಡಬೇಕು.

ದೇವರ ಮನೆ ಸ್ವಚ್ಛವಾಗಿರಬೇಕು. ದೇವರ ಮನೆಯ ವಸ್ತುಗಳನ್ನು ಸುಂದರವಾಗಿ ವಾಸ್ತು ಪ್ರಕಾರ ಜೋಡಿಸಿಡಬೇಕು. ದೇವರ ಮನೆ ಸ್ವಚ್ಛವಾಗಿದ್ದರೆ ಮನೆಯಲ್ಲಿ ದೇವರು ನೆಲೆಸಿರುತ್ತಾನೆ. ಇದ್ರಿಂದ ಜಾತಕ ದೋಷ ಕೂಡ ಕಡಿಮೆಯಾಗುತ್ತದೆ.

ಕೆಲವರ ಅಡುಗೆ ಮನೆ ಸ್ವಚ್ಛವಾಗಿರುವುದಿಲ್ಲ. ಅಂತವರು ಮಂಗಳನ ದೋಷಕ್ಕೆ ಒಳಗಾಗುತ್ತಾರೆ. ಮಂಗಳನ ದೋಷ ಕಾಡಿದಲ್ಲಿ ಮದುವೆ ವಿಳಂಬವಾಗುತ್ತದೆ. ಭೂಮಿಗೆ ಸಂಬಂಧಿಸಿದ ಸಮಸ್ಯೆ ಕಾಡುತ್ತದೆ. ಹಾಗಾಗಿ ಅಡುಗೆ ಮನೆಯನ್ನು ಸದಾ ಸ್ವಚ್ಛವಾಗಿಡಬೇಕು.

ಬುಧ, ಸೂರ್ಯ, ಶುಕ್ರ ಮತ್ತು ಚಂದ್ರನ ದೋಷವುಳ್ಳವರು ಗಿಡ-ಮರಗಳ ಆರೈಕೆ ಮಾಡಬೇಕು. ಸಸ್ಯಗಳ ಆರೈಕೆಯಿಂದ ಮಾನಸಿಕ ಒತ್ತಡ ಕೂಡ ಕಡಿಮೆಯಾಗುತ್ತದೆ.

ಮನೆಯ ಹಿರಿಯರಿಗೆ ಅವಮಾನ ಮಾಡಿದಲ್ಲಿ ಮನೆಯ ಶಾಂತಿ ಹಾಳಾಗುತ್ತದೆ. ಭಾಗ್ಯ ಎಂದೂ ಕೈ ಹಿಡಿಯುವುದಿಲ್ಲ. ಹಾಗಾಗಿ ಮನೆಯಲ್ಲಿರುವ ಹಾಗೂ ಸಮಾಜದಲ್ಲಿರುವ ಎಲ್ಲ ಹಿರಿಯರನ್ನು ಗೌರವಿಸಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...