ಬೆಂಗಳೂರು : ಪ್ರತಿ ವರ್ಷ ಮಾರ್ಚ್ 21ರಂದು ವಿಶ್ವ ಅರಣ್ಯ ದಿನ ಆಚರಿಸಲಾಗುತ್ತದೆ. ವನ್ಯಜೀವಿಗಳ ಆವಾಸ ಸ್ಥಾನವಾಗಿರುವ ಅರಣ್ಯವನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮದು… ಅರಣ್ಯ ಸಂರಕ್ಷಣೆಗೆ ನಿಮ್ಮದೊಂದು ಅಳಿಲು ಸೇವೆ ನೀಡಿ ಎಂದು ಸರ್ಕಾರ ಪ್ರಕಟಣೆ ಹೊರಡಿಸುವ ಮೂಲಕ ಮನವಿ ಮಾಡಿದೆ.
* ಉಳಿದರೆ ಕಾಡು ಉಳಿಯುವುದು ನಾಡು
ಅರಣ್ಯವನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಯಾವುದೇ ಶುಭ ದಿನಗಳ ಖುಷಿಯ ಕ್ಷಣಗಳನ್ನು ಸ್ಮರಣೀಯವಾಗಿಸಲು ಗಿಡ ನೆಡುವ ಸಂಪ್ರದಾಯವನ್ನು ಬೆಳೆಸಿಕೊಳ್ಳಿ. ಬಡಾವಣೆಯಲ್ಲಿ ಸಮಾನ ಮನಸ್ಕರ ತಂಡ ಕಟ್ಟಿಕೊಂಡು ಉದ್ಯಾನಗಳಲ್ಲಿ ಸಸಿ ನೆಟ್ಟಿ ಪೋಷಿಸಿ.ಹಬ್ಬಹರಿದಿನ, ಮಳೆಗಾಲದ ಆರಂಭದಲ್ಲಿ ಮನೆ ಕಾಂಪೌಂಡ್ ಮುಂಭಾಗ, ರಸ್ತೆಯ ಇಕ್ಕೆಲಗಳಲ್ಲಿ ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುವ ಗಿಡ ನೆಡಿ. ಮದುವೆ, ಜನ್ಮದಿನಾಚರಣೆಯಂದು ಮನೆಗೆ ಬರುವ ಅತಿಥಿಗಳಿಗೆ ಒಂದು ಸಸಿ ನೀಡುವ ಪರಿಪಾಠ ರೂಢಿಸಿಕೊಳ್ಳಿ.ಈ ಮೂಲಕ ಅರಣ್ಯ ಸಂರಕ್ಷಣೆಗೆ ನಿಮ್ಮದೊಂದು ಅಳಿಲು ಸೇವೆ ನೀಡಿ ಎಂದು ಸರ್ಕಾರ ಪ್ರಕಟಣೆ ಹೊರಡಿಸುವ ಮೂಲಕ ಮನವಿ ಮಾಡಿದೆ.
• ಜನ್ಮದಿನ, ವಿವಾಹ ವಾರ್ಷಿಕೋತ್ಸವ ಯಾವುದೇ ಖುಷಿಯ ಕ್ಷಣವನ್ನು ಸ್ಮರಣೀಯಗೊಳಿಸಲು ಗಿಡ ನೆಡಿ.
• ಬಡಾವಣೆಯಲ್ಲಿ ಸಮಾನ ಮನಸ್ಕರ ತಂಡ ಕಟ್ಟಿಕೊಂಡು ಉದ್ಯಾನಗಳಲ್ಲಿ ಸಸಿ ನೆಟ್ಟು ಪೋಷಿಸಿ.
• ಹಬ್ಬಹರಿದಿನ, ಮಳೆಗಾಲದ ಆರಂಭದಲ್ಲಿ ಮನೆ ಕಾಂಪೌಂಡ್ ಮುಂಭಾಗ, ರಸ್ತೆಯ ಇಕ್ಕೆಲಗಳಲ್ಲಿ ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುವ ಗಿಡ ನೆಡಿ.
• ಮದುವೆ, ಜನ್ಮದಿನಾಚರಣೆಯ೦ದು ಮನೆಗೆ ಬರುವ ಅತಿಥಿಗಳಿಗೆ ಒಂದು ಸಸಿ ನೀಡುವ ಪರಿಪಾಠ ರೂಢಿಸಿಕೊಳ್ಳಿ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.